ಜ್ಯೋತಿರ್ಲಿಂಗ ದರ್ಶನಕ್ಕಾಗಿ 1800 ಕಿಮೀ ಪಾದಯಾತ್ರೆ ಸಂಪನ್ನ

ಕಲಬುರಗಿ,ಫೆ 19: ಜಿಲ್ಲೆಯ ಜೇವರಗಿ ತಾಲೂಕಿನ ಹಿಪ್ಪರಗಾ ಎಸ್.ಎನ್ ಗ್ರಾಮದ ಮಡಿವಾಳಪ್ಪಗೌಡ ಮಾಲಿಪಾಟೀಲರ ನೇತೃತ್ವದಲ್ಲಿ ಯಡ್ರಾಮಿ ತಾಲೂಕಿನ ವಸ್ತಾರಿ ಗ್ರಾಮದ ಶಾಂತಪ್ಪ ಯಳಸಂಗಿ, ಶಹಾಪುರ ತಾಲೂಕಿನ ಶಿರವಾಳ ಗ್ರಾಮದ ಭೀಮರಾಯ ಗುಳೇದ , ಶಹಾಪುರ ತಾಲೂಕಿನ ದಿಗ್ಗಿ ಗ್ರಾಮದ ಸಂಗನಬಸವ ಒಡೆಯರ, ಅಲಮೇಲ ತಾಲೂಕಿನ ಮೊರಟಗಿಯ ಮಹಾಂತಪ್ಪ ಪೂಜಾರಿ ಅವರ ಐದು ಜನರ ತಂಡ ಸುದೀರ್ಘ 45 ದಿನಗಳ ಕಾಲ 1800 ಕಿ.ಮೀ ಪಾದಯಾತ್ರೆ ಸಂಪನ್ನವಾಯಿತು
ಜನವರಿ 2 ರಂದು ಹಿಪ್ಪರಗಾ ಎಸ್ ಎನ್ ಗ್ರಾಮದಿಂದ ಮಹಾರಾಷ್ಟ್ರದ ಭೀಮಾಶಂಕ ಜ್ಯೋತಿರ್ಲಿಂಗ, ನಾಶಿಕ ತೃಭಕೇಶ್ವರ ಜ್ಯೋತಿರ್ಲಿಂಗ, ಸೌರಾಷ್ಟ್ರ ಸೋಮನಾಥೇಶ್ವರ ಜ್ಯೋತಿರ್ಲಿಂಗ ಮತ್ತು ದ್ವಾರಕಾ ನಾಗೇಶ್ವರ ಜ್ಯೋತಿರ್ಲಿಂಗ, ಹೀಗೆ ಮಹಾರಾಷ್ಟ ಹಾಗೂ ಗುಜರಾತ್ ರಾಜ್ಯದಲ್ಲಿರುವ ನಾಲ್ಕು ಜ್ಯೋತಿರ್ಲಿಂಗ ದರ್ಶನಕ್ಕೆ ಪಾದಯಾತ್ರೆ ಮೂಲಕ ತೆರಳಿದ್ದರು.
ಪಾದಯಾತ್ರೆ ಮೂಲಕವೇ ಮಡಿವಾಳಪ್ಪಗೌಡರು ದ್ವಾದಶ ( 12) ಜ್ಯೋತಿರ್ಲಿಂಗ ದರ್ಶನ ಪಡೆದಂತಾಗಿದೆ ಎಂದು ಗುರುರಾಜ.ಕೆ.ಪಟ್ಟಣಶೆಟ್ಟಿ ಅವರು ತಿಳಿಸಿದ್ದಾರೆ.