127 ಕೆ.ಜಿ. ಚಿನ್ನ ಸಾಗಾಣಿಕೆ: ನಟಿ ರನ್ಯಾರಾವ್ ಗೆ 102 ಕೋಟಿ ದಂಡ

ಬೆಂಗಳೂರು, ಸೆ.2- ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ನಟಿ ರನ್ಯಾರಾವ್ ಗೆ ಇದೀಗ ದೊಡ್ಡ ಶಾಕ್ ಎದುರಾಗಿದ್ದು 102.55 ಕೋಟಿ ರೂ ದಂಡ ಪಾವತಿಸುವಂತೆ ಆದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.


127 ಕೆಜಿ ಚಿನ್ನ ಅಕ್ರಮ ಸಾಗಾಟ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಡಿಆರ್‌ಐ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ 102 ಕೋಟಿ ರೂ. ಪಾವತಿ ಮಾಡುವಂತೆ ರನ್ಯಾ ರಾವ್‌ಗೆ ಡಿಆರ್‌ಐ ಶೋಕಾಸ್‌ ನೋಟಿಸ್‌ ನೀಡಿದೆ.


ನಾಲ್ವರು ಆರೋಪಿಗಳಿಗೂ ಡಿಆರ್‌ಐ ಶೋಕಾಸ್ ನೋಟಿಸ್ ನೀಡಿದೆ. ಈಗಾಗಲೇ ಇ.ಡಿ 37 ಕೋಟಿಯಷ್ಟು ಆಸ್ತಿ ಜಪ್ತ ಮಾಡಿದೆ. ಆಸ್ತಿ ಕಳೆದುಕೊಂಡು ಖಾಲಿ ಕೈಯಾಗಿರುವ ರನ್ಯಾ ರಾವ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದಂಡ ಸಮೇತ 102 ಕೋಟಿ ಹಣ ಸಂದಾಯ ಮಾಡಲು ನೋಟಿಸ್ ಕೊಡಲಾಗಿದೆ.


ಸದ್ಯ ಕಾಫಿಪೋಸಾ ಅಡಿಯಲ್ಲಿ ರನ್ಯಾ ರಾವ್ ಬಂಧನ ಆಗಿದೆ. ಡಿಆರ್‌ಐ ತನಿಖೆಯಲ್ಲಿ ದುಬೈನಿಂದ ಚಿನ್ನ ವಹಿವಾಟು ಮಾಡಿರುವುದು ಸಾಬೀತಾಗಿದೆ. 127 ಕೆಜಿ ಚಿನ್ನವನ್ನು 1 ವರ್ಷದಲ್ಲಿ ನಟಿ ಬೆಂಗಳೂರಿಗೆ ತಂದಿದ್ದರು.