ಮಟಕಾ: ಬಂಧನ

ಕಲಬುರಗಿ,ಜು.5-ನಗರದ ಆಳಂದ ಚೆಕ್‍ಪೋಸ್ಟ್ ಹತ್ತಿರದ ಶಿವಲಿಂಗ ನಗರ ಕಾಲೋನಿಯ ಗಾರ್ಡನ್ ಹತ್ತಿರದ ಲೇಔಟ್‍ನ ಖುಲ್ಲಾ ಪ್ಲಾಟ್‍ಗಳಲ್ಲಿರುವ ಸಾರ್ವಜನಿಕ ರಸ್ತೆಯ ಮೇಲೆ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಐ ದಿಲೀಪಕುಮಾರ ಬಿ.ಸಾಗರ, ಸಿಬ್ಬಂದಿಗಳಾದ ರವೀಂದ್ರಕುಮಾರ, ಶ್ರೀಶೈಲ, ಸುನೀಲಕುಮಾರ, ನಾಗರಾಜ ಅವರು ದಾಳಿ ನಡೆಸಿ ಬುಲಂದ್ ಪರ್ವೇಜ್ ಕಾಲೋನಿಯ ಮಹ್ಮದ್ ಮಜೀದ್ (32) ಎಂಬಾತನನ್ನು ಬಂಧಿಸಿ 3,500 ರೂ.ನಗದು, ಮಟಕಾ ಚೀಟಿ, ಒಂದು ಬಾಲ್‍ಪೆನ್ ಜಪ್ತಿ ಮಾಡಿದ್ದಾರೆ. ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.