ಕಲಬುರಗಿ: ಅಳಂದ ತಾಲೂಕಿನ ಧುತ್ತರಗಾಂವ ಗ್ರಾಮದಲ್ಲಿ ವೀರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಕಡಗಂಚಿ ಕಟ್ಟಿಮಠದ ವೀರಭದ್ರ ಶಿವಾಚಾರ್ಯರು, ಸೋಲಾಪುರ ಸಿದ್ಧಾರೂಢ ಮಠದ ಮಾತೋಶ್ರೀ ಸುಶಾಂತಾದೇವಿ ಅವರ ಸಾನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ವೀರಣ್ಣ ಜಿ. ಹೊನ್ನಶೆಟ್ಟಿ, ಕಲ್ಯಾಣರಾವ ಶೀಲವಂತ,ವೀರಣ್ಣ ಎಸ್. ಮಂಗಾಣಿ, ಕಲಬುರಗಿಯ ವೀರೇಶ ಪ್ರಿಂಟರ್ಸ್‍ನ ರಾಜಕುಮಾರ ಬಂಗರಗಿ ಹಾಗೂ ಸಂಗೀತ ಕಲಾವಿದರು, ಗ್ರಾಮದ ಹಿರಿಯರು ಭಾಗವಹಿಸಿದರು.