ಕಲಬುರಗಿ: ನಗರದ ಅಪ್ಪಾನ ಕೆರೆಯ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಲೇಕ್ ವ್ಯೂ ಪುಡ್ ಕೋರ್ಟ್ ತಿಂಡಿ ಹೋಟೆಲ್ ತೆರವು ಗೊಳಿಸಬೇಕು ಮತ್ತು ಕೆರೆಯ ಜಾಗದ ಒತ್ತುವರಿಯನ್ನು ತಡೆಯಬೇಕು ಎಂಬ ಪ್ರಮುಖಬೇಡಿಕೆಗೆ ಒತ್ತಾಯಿಸಿ ಹಿಂದೂ ಜಾಗೃತಿ ಸೇನೆ ನೆತೃತ್ವದಲ್ಲಿ ಪ್ರತಿಭಟನೆ ಕೈಗೊಂಡು ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಲಾಯಿತು. ಲಕ್ಷ್ಮಣ ಸ್ವಾದಿ, ಸಚಿನ ಫರಹತಬಾದ, ಎಂಎಸ್ ಪಾಟೀಲ ನರಿಬೋಳ, ದತ್ತು ಭಾಸಗಿ, ಸಂದೀಪ ಭರಣಿ, ಪೃಥ್ವಿರಾಜ ರಾಂಪುರ, ಮಹೇಶ ಕೆಂಬಾವಿ, ಮಾಲಾ ಕಣ್ಣಿ, ಸುಮಾ ಕವಲ್ದಾರ ಸೇರಿದಂತೆ ಹಲವರಿದ್ದರು.