ಕಲಬುರಗಿ: ಓರಲ್ ಮತ್ತು ಮ್ಯಾಕ್ಸಿಲೋಫಿಶಿಯಲ್ ಶಸ್ತ್ರಚಿಕಿತ್ಸಕರ ದಿನದ ಅಂಗವಾಗಿ ನಗರದ ಅಲ್-ಬದರ್-ಡೆಂಟಲ್ ಕಾಲೇಜ್ ಮತ್ತು ಹಾಸ್ಪಿಟಲ್ ವತಿಯಿಂದ ಎಂ.ಜಿ.ರೋಡ್‍ನಲ್ಲಿ ಇಂದು ಹೆಲ್ಮೆಟ್ ವಿತರಿಸಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಆಸ್ಪತ್ರೆಯ ಪ್ರಾಂಶುಪಾಲ ಮತ್ತು ಡೀನ್ ಡಾ.ಸೈಯದ್ ಜಕಾವುಲ್ಲಾ, ಉಪ ಪ್ರಾಚಾರ್ಯ ಡಾ.ಅರ್ಷದ್ ಹುಸೈನ್, ಹೆಚ್‍ಒಡಿ ಡಾ.ನೀಲಕಮಲ್ ಹಳ್ಳೂರ, ಡಾ.ಅಯಷಾ ಸಿದ್ದಿಕ್, ಡಾ.ಚೈತನ್ಯ ಕೋಠಾರಿ, ಡಾ.ಸೈಯದ್ ಮನಜೀರ್ ಹುಸೇನ್, ಡಾ.ಮೊಹಮದ್ ತಸ್ವೀಮ್ ಉಸ್ತಾದ್, ಡಾ.ಆಯೆಷಾ ಫಾತಿಮಾ, ಡಾ.ಸೈಯದ್ ಅಫ್ಜಲ್, ಡಾ.ಶಮ್ರಾ, ಡಾ.ರಿಜ್ವಾನ್ ಅಲಿ, ಟ್ರಾಫಿಕ್ ಎಎಸ್‍ಐಗಳಾದ ಅನೀಲ್ ಜೈನ್, ರಾಜಕುಮಾರ ಕೋಬಾಳ ಇದ್ದರು.