ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಕೊನೆಯ ದಿನ ಬ್ರಾಹ್ಮಿ ಮುಹೂರ್ತದಲ್ಲಿ ತಾಯಿ ಗ್ರಾಮ ದೇವತೆ ದ್ಯಾಮವ್ವ ದೇವಿಯ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪುನರ್ ಪ್ರತಿಷ್ಠಾಪನೆ ಮಾಡಲಾಯಿತು. ಪೌರೋಹಿತರ ಏಕ ಕಂಠದ ಮಂತ್ರ ಘೋಷಗಳ ಮಧ್ಯ ಹೋಮ ಹವನಗಳು ಜರಗಿ ಪೂರ್ಣಾಹುತಿಯೊಂದಿಗೆ ಕಾರ್ಯಕ್ರಮಗಳು ಜರುಗಿದವು.