
ಗದಗ,ಜ31: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿನ ಎ.ಡಿ.ಆರ್ ಕಟ್ಟಡದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗದಗ, ಜಿಲ್ಲಾ ವಕೀಲರ ಸಂಘ ಹಾಗೂ ಡೀಡ್ಸ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅರೇ ಕಾನೂನು ಸ್ವಯಂ ಸೇವಕರಿಗೆ ಎರಡನೇ ದಿನದ ತರಬೇತಿ ಕಾರ್ಯಾಗಾರ ಶುಕ್ರವಾರ ಮುಂದುವರೆಯಿತು. ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ ಎಸ್ ಶಿವನಗೌಡ್ರ ಚಾಲನೆ ನೀಡಿ ಮಾತನಾಡಿದರು.
ಬಡವರು, ವೃದ್ದರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು,ಅಂಗವಿಕಲರು,ಅಂದರು, ವಿಕಲ ಚೇತನರು, ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳುವಾಗಿದೆ, ಉದಾರಣೆಗೆ ಆಧಾರ ಕಾರ್ಡ & ಕಾರ್ಮಿಕ,ವಿಕಲಚೇತನ ಕಾರ್ಡಗಳ ಬಗ್ಗೆ ಬಡತನ ರೇಖೆಗಿಂತ ಕೆಳಗೆ ಇರುವವರನ್ನು ಗುರುತಿಸಿ ಮಾಹಿತಿ ಕೊಟ್ಟು ಅವರಿಗೆ ಸೌಲಬ್ಯ ತಲುಪಿಸಲು ಪಿ ಎಲ್ ವಿ ಅವರ ಪಾತ್ರವು ಮಹತ್ವದಾಗಿದೆ ಎಂದರು.
ವೈಜ್ಞಾನಿಕವಾಗಿ ಮತ್ತು ವಾಸ್ತವದ ಆಧಾರದ ಮೇಲೆ ಅರ್ಥಿಯ ಸಮಸ್ಯೆಗಳನ್ನು ಆಲಿಸಿ ಕಾನೂನಿನ ಚೌಕಟ್ಟಿನಲ್ಲಿ ಉಚಿತವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಿಂದ ಸಲಹೆ, ಸೂಚನೆ, ಮಾರ್ಗದರ್ಶನ ನೀಡುವುದಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಎಮ್.ಎ ಮೌಲ್ವಿ, ಡೀಡ್ಸ್ ಯೋಜನಾ ಸಂಯೋಜಕರಾದ ತುಕಾರಾಮ್ ಎಕ್ಕಾರು, ಹಾಗೂ ಸಹಾಯಕ ಕಾನೂನು ನೆರವು ಅಭಿರಕ್ಷಕರಾದ ಗುರುರಾಜ ಬಿ. ಗೌರಿ, ಫಕ್ಕಿರಮ್ಮ ಲಕ್ಕುಂಡಿ ಉಪಸ್ಥಿತರಿದ್ದರು.


























