
ಕಲಬುರಗಿ: ತೊಗರಿ ಬೆಳೆಗಾರರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಸಂಯುಕ್ತ ಹೋರಾಟ ಕರ್ನಾಟಕ ಕಲಬುರಗಿ ಸಂಘಟನೆಯಿಂದ ನಗರದ ಜೇವರಗಿ ರಸ್ತೆ ರಾಮಮಂದಿರ ವೃತ್ತದ ಬಳಿ ರಸ್ತೆತಡೆ ನಡೆಸಲಾಯಿತು.ಶರಣಬಸಪ್ಪ ಮಮಶೆಟ್ಟಿ, ನಾಗೇಂದ್ರಪ್ಪ ಥಂಬೆ, ಮಹಾಂತಗೌಡ ಪಾಟೀಲ,ಸಿದ್ದು ಎಸ್‍ಎಲ್,ಶರಣಗೌಡ ಬಣಮಿ,ಕರೆಪ್ಪ ಕರಗೊಂಡ,ಶಿವರಾಜ ಪಾಟೀಲ ಗೊಣಗಿ ಸೇರಿದಂತೆ ಹಲವರು ಪಾಲ್ಗೊಂಡರು.
























