
ಕಲಬುರಗಿ: ಭೋಯಿ ಮತ್ತು ಇತರ ಸಮಾಜದವರು ಭೋವಿಜಾತಿ ಎಂದು ಪರಿಶಿಷ್ಟ ಜಾತಿಯ ಪ್ರಮಾಣಪತ್ರವನ್ನು ಪಡೆಯುತ್ತಿದ್ದು,ಅವರ ಪ್ರಮಾಣಪತ್ರ ಹಿಂಪಡೆದು ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಜಿಲ್ಲಾ ಭೋವಿ ( ವಡ್ಡರ) ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ದಂಡಗುಲಕರ್,ಈರಣ್ಣಾ ರಾವೂರಕರ್,ಭೀಮಾಶಂಕರ ಭಂಕೂರ,ಅಂಬಾರಾಯ ಕುಮಸೆ,ಸುಭಾಷ ಬನಪಟ್ಟೆ ಸೇರಿದಂತೆ ಹಲವರು ಪಾಲ್ಗೊಂಡರು.
























