
ಬಹುಜನ ನಾಯಕ, ಬಾಂಸೆಫ್, ಸಾಮಾಜಿಕ ಪರಿವರ್ತನೆಯ ಹರಿಕಾರ ಮಾನ್ಯವರ್ ಕಾನ್ಸಿರಾಮ್ ಅವರ ೧೯ನೇ ಪುಣ್ಯ ತಿಥಿಯನ್ನು ಇಂದು ಬೆಂಗಳೂರಿನ ಕಾನ್ಸಿ ರಾಂ ನಗರದ ಡಾ.ಬಿ. ಆರ್ ಅಂಬೇಡ್ಕರ್ ಭವನದಲ್ಲಿ ಶ್ರದ್ಧೆ ಮತ್ತು ಗೌರವದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯದ್ಯಕ್ಷರಾದ ಮಾರಸಂದ್ರ ಮುನಿಯಪ್ಪ, ರಾಷ್ಟ್ರೀಯ ಸಂಯೋಜಕರಾದ ಎಂ. ಗೋಪಿನಾಥ್, ರಾಜ್ಯ ಸಂಯೋಜಕರಾದ ಆರ್. ಮುನಿಯಪ್ಪ, ರಾಜ್ಯ ಉಪಾಧ್ಯಕ್ಷರು ಲೋಕೇಶ್ಚಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಣ್ಣ ಪೂಜಾರಿ, ನಂದಿಗುಂದ ವೆಂಕಟೇಶ್, ರಾಜ್ಯ ಖಜಾಂಚಿ ಸುಧಾ ಚಿತ್ರಲೇಖ, ರಾಜ್ಯ ಕಾರ್ಯದರ್ಶಿ ಮಂಜುನಾಥ್, ಬೈಲಪ್ಪ, ಮಹದೇವ್ ಹಾಜರಿದ್ದರು.