ಕಲಬುರಗಿ:ಅತಿವೃಷ್ಟಿ ಅನಾವೃಷ್ಟಿಯಿಂದ ಅಪಾರ ಪ್ರಮಾಣದ ಬೆಳೆಹಾನಿಯಾದ ಜಿಲ್ಲೆಗಳನ್ನು ಹಸಿಬರಗಾಲ ಘೋಷಿಸಬೇಕು ಹಾಗೂ ಕೇಂದ್ರ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಕಾರ್ಮಿಕರ ಸೇವಾ ಸಂಘ,ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.ಚಂದು ಜಾಧವ,ಶೌಕತ್ ಅಲಿ ಆಲೂರ,ಸುನೀಲ ಮಾರುತಿ ಮಾನ್ಪಡೆ ಹಾಗೂ ಇತರರಿದ್ದರು.