
ಕಲಬುರಗಿ: ನಗರದ ವಾರ್ಡ ಸಂಖ್ಯೆ 2 ಮತ್ತು 53 ರಲ್ಲಿ ಬರುವ ರಾಮನಗರ-ಭಾಗ 2,ಕೆಕೆ ನಗರ, ಬುದ್ಧ ನಗರದ ಸ್ಲಂ ಮಹಿಳೆಯರ ಕುಡಿಯುವ ನೀರು ಹಾಗೂ ಶೌಚಾಲಯ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಇಂದು
ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕದಿಂದ ಮಹಾನಗರ ಪಾಲಿಕೆ ಕಚೇರಿ ಎದುರು ಖಾಲಿಕೊಡಗಳೊಂದಿಗೆ ಪ್ರತಿಭಟನೆ ನಡೆಸಲಾಯತು. ಗೌರಮ್ಮ ಮಾಕಾ,ರೇಣುಕಾ ಸರಡಗಿ,ಶರಣು ಕಣ್ಣಿ ಸೇರಿದಂತೆ ಹಲವರು ಪಾಲ್ಗೊಂಡರು.