
ಕಲಬುರಗಿ: ಕರ್ನಾಟಕ ಸರಕಾರದ ಉದ್ದೇಶಿತ ಜಾತಿಗಳ ಶೈಕ್ಷಣಿಕ ಸಾಮಾಜಿಕ ಸಮೀಕ್ಷೆಯಲ್ಲಿ ಹಿಂದು ಹಾಗೂ ವೀರಶೈವ ಲಿಂಗಾಯತ ಜಾತಿಗಳನ್ನು ಕ್ರೈಸ್ತರೆಂದು ಗುರುತಿಸುವ ಹುನ್ನಾರವನ್ನು ಖಂಡಿಸಿ ಇಂದು ಕಲ್ಯಾಣ ಕರ್ನಾಟಕ ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆಯಿಂದ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಡಾ.ರೇವಣಸಿದ್ಧ ಶಿವಾಚಾರ್ಯರು,ಆಂದೋಲಾ ಸಿದ್ಧಲಿಂಗಸ್ವಾಮಿಗಳು, ಡಾ.ಗುರುಮೂರ್ತಿ ಶಿವಾಚಾರ್ಯರು,ಡಾ.ಸಿದ್ಧರಾಮ ಶಿವಾಚಾರ್ಯರು,ಡಾ.ರಾಜಶೇಖರ ಶಿವಾಚಾರ್ಯರು ಸೇರಿದಂತೆ ಹಲವಾರು ಪೂಜ್ಯರು ಪಾಲ್ಗೊಂಡರು.