ಸಿದ್ಧಲಿಂಗೇಶ್ವರ ಪ್ರಕಾಶನದ 105 ಪುಸ್ತಕ ಲೋಕಾರ್ಪಣೆ ಪುಸ್ತಕಗಳಿಲ್ಲದ ಜಗತ್ತು ಊಹಿಸಿಕೊಳ್ಳುವುದು ಅಸಾಧ್ಯ: ಪ್ರೊ.ಕೆಳಮನಿ

ಕಲಬುರಗಿ,ಜ.11-ಪುಸ್ತಕಗಳಿಲ್ಲದ ಜಗತ್ತು ಊಹಿಸಿಕೊಳ್ಳುವುದು ಅಸಾಧ್ಯ. ಸಮಾಜದ ಒಳಿತು ಬಯಸುವ ಎಲ್ಲರೂ ಪುಸ್ತಕ ಪ್ರೀತಿ ಹಂಚಬೇಕು ಎಂದು ರಾಯಚೂರು ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಕುಲಪತಿ ಪೆÇ್ರ.ಶಿವಾನಂದ ಕೆಳಮನಿ ಕರೆ ನೀಡಿದರು.
ಕೆಕೆಸಿಸಿಐ ಸಭಾಂಗಣದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೆÇೀ ಮತ್ತು ಪ್ರಕಾಶನ ಶನಿವಾರ ಆಯೋಜಿಸಿದ್ದ 49ನೇ ವಾರ್ಷಿಕೋತ್ಸವದಲ್ಲಿ ಪ್ರಕಾಶನ ಪ್ರಕಟಿಸಿದ 105 ಪುಸ್ತಕಗಳನ್ನು ಏಕಕಾಲಕ್ಕೆ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ವಿಶ್ವದಲ್ಲೇ ವಿಸ್ಮಯಗೊಳಿಸುವ ಆವಿಷ್ಕಾರವಾಗಿದ್ದು ಯಾವುದಾದರೂ ಇದ್ದರೆ ಅಕ್ಷರ ಆವಿಷ್ಕಾರ ಮಾತ್ರ. ಅಕ್ಷರಗಳಿಂದಲೇ ನಾಗರಿಕ ಸಂಸ್ಕøತಿ ಬೆಳೆದುಬಂದಿದೆ. ಚಾರಿತ್ರಿಕ ದಾಖಲೆಗಳು ಪುಸ್ತಕಗಳಲ್ಲಿ ಇರುವುದರಿಂದ ಪುಸ್ತಕ ಸಂಸ್ಕೃತಿ ಪಸರಿಸುವುದು ಸರ್ವಶ್ರೇಷ್ಠ ಕಾರ್ಯ ಎಂದು ಹೇಳಿದರು.
ಹೈದರಾಬಾದ್ ಉಸ್ಮಾನಿಯಾ ವಿವಿ ಕಲಾ ನಿಕಾಯ ಡೀನ್ ಪೆÇ್ರ.ಲಿಂಗಪ್ಪ ಗೋನಾಳ ಕೃತಿ ಪರಿಚಯ ಮಾಡಿ, ಏಕಕಾಲಕ್ಕೆ 105 ಪುಸ್ತಕಗಳನ್ನು ಪರಿಚಯಿಸುವುದು ಸಾಧ್ಯವಿಲ್ಲ. 40 ವರ್ಷದ ಹಿಂದೆ ಯಾವುದೇ ಪುಸ್ತಕ ನೋಡಿದರೂ ಬೆಂಗಳೂರು ಅಥವಾ ಧಾರವಾಡದ ಪ್ರಕಾಶನ ಸಂಸ್ಥೆಗಳನ್ನು ನೋಡುತ್ತಿದ್ದೆವು. ಈಗ ನಮ್ಮ ಪ್ರದೇಶದಲ್ಲೇ ಹೆಮ್ಮೆರವಾಗಿರುವ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆ ಬೆಳೆದಿರುವುದು ಲೇಖಕರೆಲ್ಲರಿಗೂ ಸಿಕ್ಕ ಗೌರವ ಎಂದು ಸಂತಸ ವ್ಯಕ್ತಪಡಿಸಿದರು.

ಮುತ್ಯಾನ ಬಬಲಾದ ಮಠದ ಶ್ರೀ ಡಾ.ಗುರುಪಾದಲಿಂಗ ಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು. ಖ್ಯಾತ ಮನೋವೈದ್ಯ, ಲೇಖಕ ಪದ್ಮಶ್ರೀ ಡಾ.ಸಿ.ಆರ್. ಚಂದ್ರಶೇಖರ ಮಾತನಾಡಿದರು. ಪ್ರಕಾಶಕರಾದ ಡಾ.ಬಸವರಾಜ ಕೊನೇಕ್, ಸಿದ್ಧಲಿಂಗ ಕೊನೇಕ್, ಶರಣಬಸವ ಕೊನೇಕ್ ಉಪಸ್ಥಿತರಿದ್ದರು. ಸಲಹಾ ಸಮಿತಿ ಸದಸ್ಯರಾದ ಡಾ.ಸ್ವಾಮಿರಾವ ಕುಲಕರ್ಣಿ, ಪೆÇ್ರ.ಶಿವರಾಜ ಪಾಟೀಲ್, ಡಾ.ಗವಿಸಿದ್ದಪ್ಪ ಪಾಟೀಲ್, ಡಾ.ಚಿ.ಸಿ.ನಿಂಗಣ್ಣ, ಡಾ.ಶರಣಬಸವಪ್ಪ ವಡ್ಡನಕೇರಿ, ಡಾ.ಜಯದೇವಿ ಗಾಯಕವಾಡ ಅವರನ್ನು ಸತ್ಕರಿಸಲಾಯಿತು.

ಕೊನೇಕ್‍ಗೆ ಪದ್ಮಶ್ರೀ ಸಿಗಲಿ
ಬೀದಿಯಲ್ಲಿ ಪುಸ್ತಕ ಮಾರುತ್ತಿದ್ದ ವ್ಯಕ್ತಿ ಕೇವಲ ಐದು ದಶಕದಲ್ಲಿ ಪುಸ್ತಕಗಳಿಗಾಗಿ ಬೃಹತ್ ಮಾಲ್ ನಿರ್ಮಿಸುವ ಮಟ್ಟಕ್ಕೆ ಬೆಳೆಯುವುದೆಂದರೆ ಸಾಮಾನ್ಯ ಮಾತಲ್ಲ. ಡಾ.ಬಸವರಾಜ ಕೊನೇಕ್ ಪದ್ಮಶ್ರೀಗೆ ಅರ್ಹರಿದ್ದು, ಕಲ್ಯಾಣ ನಾಡಿನ ಪ್ರತಿಯೊಬ್ಬ ಲೇಖಕರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಮೂಲಕ ಗೌರವ ಸಿಗುವಂತೆ ಮಾಡಬೇಕು ಎಂದು ಖ್ಯಾತ ಮನೋವಿಜ್ಞಾನಿ, ಪದ್ಮಶ್ರೀ ಡಾ.ಸಿ.ಆರ್. ಚಂದ್ರಶೇಖರ ಸಲಹೆ ನೀಡಿದರು. ಸಾಹಿತ್ಯ ಕೃತಿಗಳಿಗಿಂತಲೂ ಆರೋಗ್ಯ ಮಾಲಿಕೆಯಲ್ಲಿ ಹೆಚ್ಚು ಪುಸ್ತಕ ಪ್ರಕಟಿಸಿದರೆ ಸಾಮಾಜಿಕ ಸ್ವಾಸ್ಥ್ಯ ಹೆಚ್ಚುತ್ತದೆ. ಜನರಲ್ಲಿರುವ ಮೌಢ್ಯತೆ ಕಡಿಮೆ ಆಗುತ್ತದೆ. ಪುಸ್ತಕಗಳಿಂದಲೇ ನಾನು ಮನೋವೈದ್ಯನಾಗಿರುವೆ. ಪುಸ್ತಕಗಳು ಭವಿಷ್ಯದ ಜನಾಂಗದ ಆಸ್ತಿಯಾಗಿದ್ದು, ಈ ಆಸ್ತಿ ಸಂಪಾದನೆ ಮತ್ತು ಸಂರಕ್ಷಣೆಗೆ ಮುಂದಾಗಬೇಕು ಎಂದು ಕೋರಿದರು.