ಶೀಘ್ರದಲ್ಲಿ ಒಳ ಮೀಸಲಾತಿ ಜಾರಿಗೊಳಿಸಿ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಮೇ.28:-
ಸರ್ಕಾರದಿಂದ ಮಾಡುತ್ತಿರುವ ಜಾತಿ ಸಮೀಕ್ಷೆ ಕಾರ್ಯವು ಮುಗಿಯುವ ಅಂತದಲ್ಲಿದ್ದು ಅತೀ ಶೀಘ್ರದಲ್ಲಿ ಒಳ ಮೀಸಲಾತಿ ಜಾರಿಗೊಳಿಸುವಂತ್ತೆ ಆದಿ ಜಾಂಬವ ಮಾದಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷ ಸೀಗೂರು ವಿಜಯ್ ಕುಮಾರ್ ಒತ್ತಾಯಿಸಿದರು.


ಪಟ್ಟಣದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯಾದ್ಯಂತ ಒಳಮೀಸಲಾತಿ ಜಾರಿಗಾಗಿ ನ್ಯಾಯಮೂರ್ತಿ ನಾಗ ಮೋಹನ್‍ದಾಸ್ ರವರ ಪುನರ್ ಸಮೀಕ್ಷೆಯನ್ನು ನಡೆಸುತ್ತಿದ್ದು ಇನ್ನೇರೆಡು ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳಿಲಿದೆ. ಸಮೀಕ್ಷೆ ಮುಗಿದ ತಕ್ಷಣ ಸಿದ್ದರಾಮಯ್ಯರವರ ಸರ್ಕಾರ ಕೂಡಲೆ ಒಳ ಮೀಸಲಾತಿ ಜಾರಿ ಮಾಡಬೇಕು. ಏಕೆಂದರೆ ಈ ಮಾದಿಗ ಜನಾಂಗವು ಶತ ಶತಮಾನದಿಂದ ಶೋಷಣೆಗೆ ಒಳಗಾಗಿದ್ದು ಮೀಸಲಾತಿಯಲ್ಲು ವಂಚನೆಯಾಗಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದೆ.ಇದರೊಂದಿಗೆ ಇನ್ನು ಅನೇಕ ಜಾತಿಗಳಿಗೆ ಸಾಮಾಜಿಕ ನ್ಯಾಯ ಸಿಗಬೇಕು ಎಂದು ಬಹಳ ವರ್ಷಗಳಿಂದ ಮಾದಿಗ ಜನಾಂಗದ ವಿವಿಧ ಸಂಘಟನೆಗಳು ಸೇರಿ ರಾಜ್ಯದ್ಯಾಂತ ಹೋರಾಟಗಳನ್ನು ಮಾಡುತ್ತ ಬಂದಿದೆ. ಇದನ್ನು ಮನಗಂಡು ನಮ್ಮ ಜನಾಂಗದ ಮಂದ ಕೃಷ್ಣ ಮಾದಿಗರವರು ಮತ್ತು ರಾಜ್ಯ ಮುಖಂಡರು ಸೇರಿ ಸುಪ್ರೀಂಕೋರ್ಟ್‍ಗೆ ಮನವಿ ಸಲ್ಲಿಸಿ ಕೋರ್ಟ್‍ನಿಂದಲು ಸಾಮಾಜಿಕ ನ್ಯಾಯವು 101 ಜಾತಿಗಳಿಗೆ ಅನುಕೂಲವಾಗುವಂತೆ ಒಳಮೀಸಲಾತಿ ಅವಶ್ಯಕತೆ ಇದೆ ಆದ್ದರಿಂದ ಆಯ ರಾಜ್ಯಗಳು ಒಳಮೀಸಲಾತಿ ನೀಡಬಹುದು ಎಂದು ಆದೇಶ ನೀಡಿದೆ.


ಈ ಆದೇಶ ಮೇರೆಗೆ ಮನೆ ಮನೆ ಸಮೀಕ್ಷೆ ನಡೆಸಿ ವರದಿ ಪಡೆಯುತ್ತಿದ್ದು ಈಗ ಮುಗಿಯುವ ಹಂತ ತಲುಪಿದೆ. ಆದ್ದರಿಂದ ಈ ಕೂಡಲೆ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ತಾಲ್ಲೂಕು ಅಧ್ಯಕ್ಷ ಚಪ್ಪರದಳ್ಳಿ ರವಿ ಮಾತನಾಡಿ ಮಾದಿಗ ಸಮುದಾಯದ ಹಕ್ಕು ಮತ್ತು ಸ್ವಾತಂತ್ರಕ್ಕಾಗಿ ಅನೇಕ ನಾಯಕರು ಸಾಕಷ್ಟು ಶ್ರಮಿಸುತ್ತಿದ್ದಾರೆ.ಆದರೆ ಒಳ ಮೀಸಲಾತಿ ಹೋರಾಟ ಮಾಡುತ್ತಿರುವ ನಮ್ಮ ಸಮುದಾಯದ ಮುಖಂಡರುಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತ ಕಾನೂನಡಿಯಲ್ಲಿ ಸಿಲುಕಿಸುವ ಹುನ್ನಾರವನ್ನು ಇತರರು ಮಾಡುತ್ತಿದ್ದಾರೆ ಇದನ್ನು ಸಂಘಟನೆ ಖಂಡಿಸುತ್ತದೆ ಮತ್ತು ಮುಂದಿನ ದಿನಗಳಲ್ಲಿ ಇದೇ ರೀತಿಯ ವರ್ತನೆ ಮುಂದುವರೆದರೆ ನಾವು ಕೂಡ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.


ಪತ್ರಿಕಾಗೋಷ್ಟಿಯಲ್ಲಿ ಸಂಘದ ಗೌರವಾಧ್ಯಕ್ಷ ಶಿವಣ್ಣ ಭೂತನಳ್ಳಿ,ಉಪಾಧ್ಯಕ್ಷ ಕುಮಾರ್,ಸಂಘಟನಾ ಕಾರ್ಯದರ್ಶಿ ಆನಂದ ಹಾಜರಿದ್ದರು.