
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ
ಸುಳ್ಯ:ತಾಲೂಕಿನಾದ್ಯಂತ ಶನಿವಾರ ಬಕ್ರೀದ್ ಹಬ್ಬದ ಆಚರಣೆ ಇರುವ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಬುಧವಾರ ಶಾಂತಿ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್.ಐ ಸಂತೋಷ್ ರವರು ಹಬ್ಬ ಆಚರಣೆಯನ್ನು ಶಾಂತಿಯುತವಾಗಿ ಆಚರಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಾನೂನಿನ ನಿಯಮಗಳನ್ನು ಪಾಲನೆ ಮಾಡಿ ಹಬ್ಬ ಆಚರಣೆಯನ್ನು ಮಾಡಿ ಎಂದು ಸೂಚನೆ ನೀಡಿದರು. ಜಿಲ್ಲೆಯ ಕೆಲವು ಭಾಗದಲ್ಲಿ ಉಂಟಾಗಿರುವ ಘಟನೆಗಳ ಕುರಿತು ಪೊಲೀಸ್ ಇಲಾಖೆ ಕಟ್ಟು ಮಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು ಜನತೆ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಸಭೆಯಲ್ಲಿ ಸುಳ್ಯ ತಾಲೂಕು ಸಂಯುಕ್ತ ಮುಸ್ಲಿಂ ಜಮಾಅತ್ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಸವಾದ್ ಗೂನಡ್ಕ, ನ. ಪಂ ಸದಸ್ಯ ಕೆ.ಎಸ್ ಉಮ್ಮರ್, ರಶೀದ್ ಜಟ್ಟಿಪಳ್ಳ, ರಫೀಕ್ ಬಾಳೆಮಕ್ಕಿ, ಖಲಂದರ್ ಶಾಫಿ, ಅಬ್ಬಾಸ್ ಎ. ಬಿ ಅಜ್ಜಾವರ, ಶರೀಫ್ ರಿಲೇಕ್ಸ್, ಸಿದ್ದಿಕ್ ಗೂನಡ್ಕ, ಹನೀಫ್ ಜಯನಗರ, ಬಿ. ಉಮ್ಮರ್, ಬಿ. ಎಂ ಎಸ್ ಆಟೋ ಚಾಲಕ ಸಂಘದ ಪ್ರಶಾಂತ್ ಭಟ್, ಪ್ರ. ಕಾರ್ಯದರ್ಶಿ ನಾರಾಯಣ ಶಾಂತಿನಗರ, ಕಾರ್ಯದರ್ಶಿ ಸುರೇಂದ್ರ ಕಾಮತ್, ಬಾನು ಪ್ರಕಾಶ್, ಮಿಥುನ್, ದಲಿತ ಮುಖಂಡ ನಂದರಾಜ್ ಸಂಕೇಶ್ ಮೊದಲಾದವರು ಉಪಸ್ಥಿತರಿದ್ದರು.