ರಾಷ್ಟ್ರೋತ್ಥಾನದಲ್ಲಿ ೩ದಿನಗಳ ಕಾಲ ವಿವೇಕ ಸ್ಮರಣೆ ಸ್ವಾಮಿ ವಿವೇಕಾನಂದರ ಸಾಧನೆಗೆ ಯೋಗ ಸಹಕಾರಿ-ಹಾಲಸಿದ್ದೇಶ್ವರ ಸ್ವಾಮೀಜಿ

oplus_10485760

ಸಂಜೆವಾಣಿ ವಾರ್ತೆ

 ಹಗರಿಬೊಮ್ಮನಹಳ್ಳಿ:ಜ.11 ಸ್ವಾಮಿ ವಿವೇಕಾನಂದರ ಸಾಧನೆಗೆ ಯೋಗವೊಂದೇ ಸಹಕಾರಿಯಾಗಿದೆ ಎಂದು ಹಾಲಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ರಾಷ್ಟ್ರೋತ್ಥಾನ  ವಿದ್ಯಾಕೇಂದ್ರದ ಆವರಣದಲ್ಲಿ ಶನಿವಾರದಿಂದ ಮೂರುದಿನಗಳ ಕಾಲ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾ ಸ್ಮರಣೆಯ ಯೋಗಶಿಬಿರರ್ಥಿಗಳಿಗೆ ಉಪನ್ಯಾಸ ನೀಡಿದರು. ಒಬ್ಬ ಮನುಷ್ಯ ಸಾಧನೆಯ ಶಿಖರವನ್ನೇರಲು ಮತ್ತು ಯೋಗಿ ಎನಿಸಿಕೊಳ್ಳಲು ಯೋಗ ಮತ್ತು ಧ್ಯಾನ ನಿತ್ಯ ಅವಶ್ಯವಾಗಿದೆ. ಪ್ರಾಣ, ಮಾನಸಿಕ ಧ್ಯಾನ, ಸ್ವಾಧೀನತೆ, ಯೋಗ ಮತ್ತು ಸಮಾಧಿ ಸಂಕ್ಷೇಪ ರಾಜಯೋಗ, ಮೂಲಾಧರ ಚಕ್ರದಿಂದ ಕುಂಡಲಿನಿ ಶಕ್ತಿಯನ್ನು ಜಾಗೃತಿಗೊಳಿಸಿ ಸಹಸ್ರ ದಳಕ್ಕೆ ಏರಿಸುತ್ತಾನೋ ಅವರೇ ಯೋಗಿಗಳು ಎಂದರು. ಅಂತಹ ಸಾಧನೆಯನ್ನು ಸ್ವಾಮಿ ವಿವೇಕಾನಂದರು ಮಾಡಿದ್ದರು. ಆ ನಿಟ್ಟಿನಲ್ಲಿ ನಾವು ನೀವೆಲ್ಲ ಸಾಗಿದರೆ ಸಾಧನೆಗೈಯಲು ಸಾಧ್ಯ ಎಂದರು.

ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿಯಾದ ಬಸವನಗೌಡ್ರು ಮಾತನಾಡಿ, ಮೂರು ದಿನಗಳ ಕಾಲ, ಶನಿವಾರ, ಭಾನುವಾರ ಹಾಗೂ ಸೋಮವಾರ ಹಮ್ಮಿಕೊಂಡಿದ್ದು. ಈ ಯೋಗ ಮತ್ತು ಧ್ಯಾನ ಶಿಬಿರವನ್ನು ನಿತ್ಯ ಬೆಳಗಿನ ಜಾವ ೬ಗಂಟೆಗೆ ಆರಂಭವಾಗುತಿದ್ದು, ಆಗಮಿಸುವ ೧೮ವರ್ಷಗಳ ಮೇಲ್ಪಟ್ಟ ಶಿಬಿರಾರ್ಥಿಗಳು ಬಿಳಿಯ ಶುಭ್ರವಾದ ಬಟ್ಟೆಯನ್ನು ಧರಿಸಿ ಆಗಮಿಸಬೇಕು, ೧೦ನಿಮಿಷ ಮುಂಚಿತವಾಗಿಯೇ ಉಪಸ್ಥಿತರಿರಬೇಕು, ಮಾತೆಯರಿಗೂ ಅವಕಾಶ ಇದೆ ಎಂದರು.

ಈ ವೇಳೆ ಪ್ರಮುಖರಾದ ಸೋಮನಗೌಡ್ರು, ಮುಖ್ಯಶಿಕ್ಷಕರಾದ ದುರಗಣ್ಣ, ಎಂ.ಪಾಪಣ್ಣ, ಮಂಜುನಾಥ, ಆರ್.ಕೊಟ್ರಪ್ಪ, ವೀರೇಶ, ವೆಂಕಟೇಶ, ರಂಗನಾಥ, ಪದ್ಮವಿಠಲ್, ಎ.ಎಂ.ದಾನಯ್ಯ, ಬಿ.ರಮೇಶ, ಬಿ.ನಟರಾಜ, ಎಸ್.ಸುಭಾಷ್, ಡಾ.ಅಜ್ಜಯ್ಯ, ಡಾ.ವಿಶ್ವನಾಥ, ಮತ್ತಿತರರು ಇದ್ದರು.