ಯಶ್ ಜನುಮ ದಿನಕ್ಕೆ ಟಾಕ್ಸಿಕ್ ಟೀಸರ್

ಅಭಿಮಾನಿಗಳಿಗೆ ದರ್ಶವಿಲ್ಲ ಎಂದ ರಾಕಿಭಾಯ್

ನಟ ಯಶ್ ಅವರ 40ನೇ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ‘ಕೆಜಿಎಫ್ 2’ ಬಿಡುಗಡೆಯಾಗಿ ಹಲವು ವರ್ಷಗಳಾಗಿದ್ದು, ‘ಕೆಜಿಎಫ್ 3’ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡುವುದಾಗಿ ಹೇಳಿತ್ತು. ಯಶ್ ಜನ್ಮದಿನದಂದು ‘ಕೆಜಿಎಫ್ 3’ ಬಗ್ಗೆ ಮಹತ್ವದ ಅಪ್‌ಡೇಟ್ ಬರಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಇಂದು ಬಹುನಿರೀಕ್ಷಿತ ಟಾಕ್ಸಿಕ್ ಸಿನೆಮಾದ ಟೀಸರ್ ಬಿಡುಗಡೆಯಾಗಲಿದೆ.

ಕೆಜಿಎಫ್ 2’ ರಿಲೀಸ್ ಆಗಿ ನಾಲ್ಕು ವರ್ಷಗಳು ಕಳೆಯುತ್ತಾ ಬಂದಿವೆ. ಆದಾಗ್ಯೂ ಇದರ ಬಗ್ಗೆ ಮಾಹಿತಿ ಇಲ್ಲ. ‘ಕೆಜಿಎಫ್ 3’ ಘೋಷಣೆ ಬಗ್ಗೆ ಮಾಹಿತಿ ನೀಡುವುದಾಗಿ ಹೊಂಬಾಳೆ ಫಿಲ್ಮ್ಸ್ ಹೇಳಿತ್ತು. ಆದರೆ, ಯಾವುದೇ ಅಪ್​ಡೇಟ್ ಸಿಕ್ಕಿಲ್ಲ. ಇಂದು ಯಶ್ ಬರ್ತ್​​ಡೇ ದಿನ ಈ ಬಗ್ಗೆ ಘೋಷಣೆ ಆಗಬಹುದೇ ಎಂಬ ಕೌತುಕದಲ್ಲಿ ಫ್ಯಾನ್ಸ್ ಇದ್ದಾರೆ.

ಈ ಜನ್ಮದಿನದಂದು ನಿಮ್ಮನ್ನು ಖುದ್ದಾಗಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ’ ಎಂದು ನಟ ‘ರಾಕಿಂಗ್‌ ಸ್ಟಾರ್’ ಯಶ್‌ ಅವರು ತಮ್ಮ ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ್ದಾರೆ.

ಟಾಕ್ಸಿಕ್‌ ಸಿನಿಮಾ ಸಂಬಂಧಿತ ಕೆಲಸಗಳಲ್ಲಿ ಬ್ಯುಸಿ ಆಗಿರುವ ಅವರು, ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸಂದೇಶ ರವಾನಿಸಿದ್ದಾರೆ.

‘ನೀವು ನನ್ನನ್ನು ಭೇಟಿಯಾಗಲು ಕೆಲವು ವರ್ಷಗಳಿಂದ ಕಾತರದಿಂದ ಕಾಯುತ್ತಿದ್ದೀರಿ ಎಂಬುದು ಚೆನ್ನಾಗಿ ಗೊತ್ತು. ನನಗೂ ನಿಮ್ಮನ್ನೆಲ್ಲ ಭೇಟಿಯಾಗುವ ಹಂಬಲವಿದೆ. ಈ ಜನ್ಮದಿನದಂದು ನಿಮ್ಮನ್ನೆಲ್ಲ ಭೇಟಿಯಾಗಬೇಕೆಂದು ನಾನೂ ಬಯಸಿದ್ದೆ. ಆದರೆ, ಇದೇ ಮಾರ್ಚ್‌ 19ರಂದು ಟಾಕ್ಸಿಕ್‌ ಸಿನಿಮಾ ಬಿಡುಗಡೆಯಾಗಬೇಕಿದೆ. ಅಷ್ಟರೊಳಗೆ ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ಮುಗಿಸಬೇಕಿದೆ. ಹಾಗಾಗಿ, ನಿಮ್ಮನ್ನು ಖುದ್ದಾಗಿ ಭೇಟಿಯಾಗಲು ಆಗುತ್ತಿಲ್ಲ. ಶೀಘ್ರದಲ್ಲೇ ಇನ್ನೂ ದೊಡ್ಡ ಮಟ್ಟದಲ್ಲಿ ಭೇಟಿಯಾಗೋಣ.

ಅಲ್ಲಿಯವರೆಗೆ ನೀವು ಕಳುಹಿಸುವ ಸಂದೇಶಗಳನ್ನು ಓದುತ್ತೇನೆ. ನಿಮ್ಮ ಪ್ರೀತಿಯನ್ನು ಸದಾ ಸ್ಮರಿಸುತ್ತೇನೆ’ ಎಂದು ತಮ್ಮ ಪ್ರೀತಿಯ ಅಭಿಮಾನಿಗಳಿಗೆ ತಿಳಿಸಿದ್ದಾರೆ.