ಬ್ರಹ್ಮಾವರ: ಪತ್ನಿಯ ಅತಿಯಾದ ಮೊಬೈಲ್ ಬಳಕೆ; ಸಿಟ್ಟಿನಿಂದ ಕೊಲೆ ಮಾಡಿದ ಪತಿ ಅರೆಸ್ಟ್

ಬ್ರಹ್ಮಾವರ-ಪತ್ನಿ ಅತಿಯಾಗಿ ಮೊಬೈಲ್ ಉಪಯೋಗಿಸುತ್ತಾಳೆ ಎಂದು ಸಿಟ್ಟಿನಿಂದ ಪತಿಯೇ ಆಕೆಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.
ಆರೋಪಿ ಪತಿ ಗಣೇಶ್ ಪೂಜಾರಿಯು ತನ್ನ ಪತ್ನಿ ರೇಖಾಳನ್ನು ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ಆರೋಪಿ ಗಣೇಶ್ ಪೂಜಾರಿ ವಿಪರೀತ ಮದ್ಯ ವ್ಯಸನಿಯಾಗಿದ್ದ. ಪತ್ನಿ ರೇಖಾ ಹೆಚ್ಚಾಗಿ ಮೊಬೈಲ್ ಉಪಯೋಗಿಸುತ್ತಾಳೆ ಎಂದು ಸಿಟ್ಟಿನಿಂದ ಜೂನ್ ೧೯ ರ ರಾತ್ರಿ ವಿಪರೀತ ಮದ್ಯ ಸೇವಿಸಿ ಮನೆಗೆ ಮರಳಿದ್ದಾನೆ. ಈ ವೇಳೆ ಆತ ಅವಳೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾನೆ ಎನ್ನಲಾಗಿದೆ. ಜಗಳ ಉಲ್ಬಣಗೊಂಡು, ರಾತ್ರಿ ೧೧:೩೦ ರ ಸುಮಾರಿಗೆ, ಆತ ಕತ್ತಿಯಿಂದ ಆಕೆಗೆ ಹಲ್ಲೆ ಮಾಡಿದ್ದು, ಪರಿಣಾಮವಾಗಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಗಣೇಶ್ ಪೂಜಾರಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.