
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.19: ತಾಲೂಕಿನ ಶಂಕರಬಂಡೆ ಗ್ರಾಮದಲ್ಲಿ ಕಳೆದ 52 ವರ್ಷಗಳಿಂದ ಬಸವ ಜಯಂತಿ ಅಂಗವಾಗಿ ಗ್ರಾಮದ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ
ಸಪ್ತ ಭಜನೆ ನಡೆಸುತ್ತಾ ಬಂದಿದ್ದು. ಈ ವರ್ಷ ಏ.13 ರಿಂದ ಈ ಭಜನೆ ಕಾರ್ಯಕ್ರಮ ಆರಂಭಿಸಿದೆ.
ಜಿಲ್ಲೆಯ ಹಾಗು ನೆರೆಯ ಆಂದ್ರ ಪ್ರದೇಶದ 35 ಹಳ್ಳಿಗಳ ಭಜನಾ ಮಂಡಳಿಗಳಿಂದ ಏಳು ದಿನಗಳ ಕಾಲ ಹಗಲು ರಾತ್ರಿ ಶಿವನಾಮ ಸ್ಮರಣೆಯ ಭಜನೆ ದಾಸೋಹದೊಂದಿಗೆ.
ಕುಣಿತದಿಂದ ಕೂಡಿದ ಭಜನಾ ಹಾಡುಗಾರಿಕೆ ನೋಡುಗರ ಕಣ್ಮನ ಸೆಳೆಯುತ್ತದೆ
ಹಗಲು ರಾತ್ರಿಯ ಈ ಕಾರ್ಯಕ್ರಮವು ಭಕ್ತಿಯ ಪರಾಕಷ್ಟೇಯಿಂದ ಕೂಡಿದೆ. ನಾಳೆ ಬೆಳಿಗ್ಗೆ ಗಂಗಾಪೂಜೆಯ ಮೂಲಕ ಸಪ್ತ ಭಜನೆ ಮುಗಿಯಲಿದೆ. ನಂತರ ವಿಶೇಷ ಪೂಜೆ ಪ್ರಸಾದ ವಿತರಣೆ ನಡೆಯಲಿದೆಂದು ಭಕ್ತ ಸಮೂಹ ತಿಳಿಸಿದೆ.






















