
ಬೆಂಗಳೂರು, ಸೆ.೧-ಟೀಮ್ ಇಂಡಿಯಾ ಏಕದಿನ ನಾಯಕ ರೋಹಿತ್ ಶರ್ಮಾ ಟೆಸ್ಟ್? ತಂಡದ ನಾಯಕ ಶುಭ್‌ಮನ್ ಗಿಲ್ ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಬಿಸಿಸಿಐ ಬೆಂಗಳೂರು ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಸಲಾಗಿದ್ದ ಪ್ರಿ-ಸೀಸನ್ ಫಿಟ್‌ನೆಸ್ ಪರೀಕ್ಷೆಯಲ್ಲಿ ರೋಹಿತ್ ಮತ್ತು ಗಿಲ್ ಉತ್ತೀರ್ಣರಾಗಿದ್ದಾರೆ.
ಈ ಇಬ್ಬರ ಜೊತೆಗೆ, ಯಶಸ್ವಿ ಜೈಸ್ವಾಲ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್ ಕೂಡ ತೇರ್ಗಡೆ ಹೊಂದಿದ್ದಾರೆ. ಎನ್?ಸಿಎಯಲ್ಲಿ, ಯೋಯೋ ಜೊತೆಗೆ ಡಿಎಕ್ಸ್‌ಎ ಸ್ಕ್ಯಾನ್ ಫಿಟ್‌ನೆಸ್ ಪರೀಕ್ಷೆ ನಡೆಸಲಾಗಿತ್ತು. ಯೋಯೋ ಫಿಟ್‌ನೆಸ್ ಪರೀಕ್ಷೆ ಆಗಿದ್ದರೇ, ಡಿಎಕ್ಸ್‌ಎ ಮೂಳೆಗಳ ಪರೀಕ್ಷೆ ಆಗಿರಲಿದೆ.
ರೋಹಿತ್, ಶಾರ್ದೂಲ್ ಠಾಕೂರ್ ಹೊರತುಪಡಿಸಿ, ಇತರ ಆಟಗಾರರು ಶೀಘ್ರದಲ್ಲೇ ಏಷ್ಯಾಕಪ್‌ಗಾಗಿ ದುಬೈಗೆ ಪ್ರಯಾಣಿಸಲಿದ್ದಾರೆ. ಈ ಪಂದ್ಯಾವಳಿ ಸೆಪ್ಟೆಂಬರ್ ೦೯ ರಂದು ಪ್ರಾರಂಭವಾಗಲಿದೆ. ಈಗ ರೋಹಿತ್ ಟಿ ೨೦ ಮತ್ತು ಟೆಸ್ಟ್ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆ, ಆದ್ದರಿಂದ ಅವರು ಇನ್ನೂ ಕೆಲವು ದಿನಗಳವರೆಗೆ ಎನ್?ಸಿಎದಲ್ಲಿ ಇರಲಿದ್ದಾರೆ ಎಂದು ವರದಿಯಾಗಿದೆ.
ಭಾರತ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.
ಜ್ವರದಿಂದ ಬಳಲುತ್ತಿದ್ದ ಶುಭಮನ್ ಗಿಲ್ ಇತ್ತೀಚೆಗೆ ದುಲೀಪ್ ಟ್ರೋಫಿಯಿಂದ ಹಿಂದೆ ಸರಿದಿದ್ದರು. ಇದರಿಂದಾಗಿ ಗಿಲ್ ಸಹ ಫಿಟ್ನೆಸ್ ಪರೀಕ್ಷೆಯಲ್ಲಿ ಭಾಗಿ ಆಗಿ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಿದರು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಗಿಲ್ ಏಷ್ಯಾ ಕಪ್‌ನಲ್ಲಿ ಆಡುವುದು ಖಚಿತವಾಗಿದೆ. ಈ ಪಂದ್ಯಾವಳಿಯಲ್ಲಿ, ಗಿಲ್ ಉಪನಾಯಕನಾಗಿ ಕಣಕ್ಕಿಳಿಯಲಿದ್ದಾರೆ.