
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.19: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಕರ್ನಾಟಕ ದಲಿತ ಮಹಿಳಾ ಒಕ್ಕೂಟ (ಸ್ವಾಭಿಮಾನಿ ಪ್ರೊ: ಬಿ ಕೃಷ್ಣಪ್ಪ ಸ್ಥಾಪಿತ) ಸಂಘಟನೆ ವತಿಯಿಂದ ನಿನ್ನೆ ಸಾಯಂಕಾಲ 6 ಗಂಟೆಗೆ ಡಾ: ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿಯನ್ನು ದಲಿತ ಮಹಿಳಾ ಒಕ್ಕೂಟದಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿಯಾದ ಶ್ರೀಮತಿ ಃ ಂ ಮಲ್ಲೇಶ್ವರಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮಹಾ ನಾಯಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ಮಹೇಶ್ ಕುರುವಳ್ಳಿ ಭಾಗವಹಿಸಿದರು ಮತ್ತು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ರಾಮಣ್ಣ ಚೇಳ್ಳಗುರ್ಕಿ ಹಾಗೂ ಮಹಮ್ಮದ್ ಅತವುಲ್ಲ, ವೆಂಕಟೇಶ್, ಮಹಿಳಾ ಮುಖಂಡರಾದ ಜ್ಯೋತಿ, ಲಾವಣ್ಯ, ಗೌರಮ್ಮ, ಹಂಪಮ್ಮ, ಅಂಬಮ್ಮ,ಗಂಗಮ್ಮ, ಲಕ್ಷ್ಮಮ್ಮ, ಶ್ರೀಲತ, ಈರಮ್ಮ, ಇನ್ನು ಮುಂತಾದವರು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ರಾಮಣ್ಣ ಚೇಳ್ಳಗುರ್ಕಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ






















