Home ಜಿಲ್ಲೆ ಕೆಪಿಸಿಎಲ್ ನಿಂದ ಹುದ್ದೆ ಭರ್ತಿಯಲ್ಲಿ ಅನ್ಯಾಯ

ಕೆಪಿಸಿಎಲ್ ನಿಂದ ಹುದ್ದೆ ಭರ್ತಿಯಲ್ಲಿ ಅನ್ಯಾಯ

oplus_2097152

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮಾ.24: ಕರ್ನಾಟಕ ವಿದ್ಯತ್ ನಿಗಮ(ಕೆಪಿಸಿಎಲ್) ನಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡುವಲ್ಲಿ ಅನ್ಯಾಯವಾಗಿದೆ ಎಂದು ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿ  ಕೀರ್ತಿ ಕಿಶೋರ ಆರೋಪಿಸಿದ್ದಾರೆ.

ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಇವರು. ಕೆಪಿಸಿಎಲ್ ನಿಂದ ಖಾಲಿ ಹುದ್ದೆಗಳಿಗೆ 2017 ರಲ್ಲಿ ನೋಟಿಫಿಕೇಷನ್ ಮಾಡಿ, 2018 ಪರೀಕ್ಷೆ   ನಡೆದು ಫಲಿತಾಂಶ ತಡೆಹಿಡಿದರು ಇಒ ಬಗ್ಗೆ ಎರೆಡು ಪ್ರಕರಣ ದಾಖಲಾಗಿತ್ತು. ನ್ಯಾಯಾಲಯ ಮರು ಪರೀಕ್ಷೆ ಮಾಡಲು ಸೂಚಿಸಿತ್ತು.

ಮತ್ತೆ 2023 ನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ  (ಕೆಇಎ).  ನೆಗಟಿವ್ ಮಾರ್ಕ್ ನಲ್ಲಿ ಫಲಿತಾಂಶ ಪ್ರಕಟಿಸಿತ್ತು. ಆದರೆ ನೋಟಿಫಿಕೇಷನ್ ನಲ್ಲಿ ನೆಗಟಿವ್ ಮಾರ್ಕ್ ಎಂದು ಹೇಳಿರಲಿಲ್ಲ. ಇದರ ವಿರುದ್ದ ನ್ಯಾಯಾಲಯದ ಮೊರೆ ಹೋದಾಗ  ಸಿಂಗಲ್ ಮತ್ರು ಡಬಲ್ ಬೆಂಚ್ ನಲ್ಲಿ ಪರೀಕ್ಷೆ ಸರಿಯಾಗಿದೆಂದು ಹೇಳಿತು. ಇದರ ವಿರುದ್ದ ಮತ್ತೆ ಒಂಬತ್ತು ಜನ ಪ್ರಕರಣ ದಾಖಲಿಸಿದ್ದರು. ಅದಕ್ಕೆ 602 ಜನರು ನ್ಯಾಯಾಲಯದ ಮೊರೆ ಹೋಗಿ. ತೀರ್ಪನ್ನು ಕಾಯ್ದಿರಿಸಿ ನೇಮಕಾತಿಗೆ ಆದೇಶ ಕೋರಿದ್ದರು. ನ್ಯಾಯಾಲಯ 2024 ರ ಮಾರ್ಚ್ ನಲ್ಲಿ ಸಮ್ಮತಿಸಿತ್ತು. ಆದರೂ ನೇಮಕಾತಿ ಆದೇಶ ನೀಡಲಿಲ್ಲ. ನಂತರ ಮೇ ನಲ್ಲಿ ತೀರ್ಪು ಮರ ಪರೀಕ್ಷೆಗೆ ಆದೇಶ ನೀಡಿತು. ಅದರ ವಿರುದ್ದ ಕೆಪಿಸಿಎಲ್ ನ್ಯಾಯಾಲಯದ ಮೊರೆ ಹೋಗಿತ್ತು.  ಇದರ ವಿರುದ್ದ ಆಯ್ಕೆ ಬಯಸಿದ್ದ ಅಭ್ಯರ್ಥಿಗಳು ಸುಪ್ರೀಂ ಮೊರೆ ಹೋಗಿದ್ದರು. ಅಲ್ಲಿ ಪಾಸಿಟಿವ್ ಮತ್ತು ನೆಗಟಿವ್ ಬಂದವರಿಗೆ ಕೊಡಲಿದೆಂದು ಕೆಪಿಸಿಎಲ್ ಹೇಳಿತು.

ಹೀಗೆ ಸ್ಪಷ್ಟತೆ ಇಲ್ಲದೆ ಪರೀಕ್ಷೆಗಳನ್ನು ನಡೆಸಿ  ಅನೇಕರಿಗೆ ಅನ್ಯಾಯ ಮಾಡಿದೆ ಎಂದು ತಿಳಿಸಿದರು.