ಬಾದಾಮಿ,ಮೇ.೨೯: ಸ್ವಾಭಿಮಾನಿ ಕರ್ನಾಟಕ ವೇದಿಕೆ , ಬೆಂಗಳೂರು ೨೦೨೪ ರ ಸ್ವಾಭಿಮಾನಿ ಪುಸ್ತಕಗೆ ಬಾದಾಮಿಯ ಹೆಸರಾಂತ ವೈದ್ಯ ಸಾಹಿತಿ, ಖ್ಯಾತ ವೈದ್ಯರಾದ ಡಾ.ಕರವೀರಪ್ರಭು ಕ್ಯಾಲಕೊಂಡ ಅವರ ‘ನೀವೂ ನೆಪೋಲಿಯನ್ ಆಗಿ’ ಪ್ರಬಂಧ ಪುಸ್ತಕ ಆಯ್ಕೆಯಾಗಿದೆ.
ಡಾ.ಕರವೀರಪ್ರಭು ಕ್ಯಾಲಕೊಂಡ ಇವರು ಜಿಲ್ಲಾ ಸರ್ಜನ್ ರಾಗಿ ಸೇವೆ ಸಲ್ಲಿಸಿ, ಸಾಹಿತ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಕ್ಯಾಲಕೊಂಡ ಸಿಸ್ಟಮ್ ಆಫ್ ಸ್ಕೋರಿಂಗ್ ಫಾರ್ ಪ್ರಿಡಿಕೈನ್ ಆಫ್ ಪೋಲಿಯೋಮೈಲೈಟಿಸ್ ಸಂಶೋಧನಾತ್ಮಕ ಪ್ರಬಂಧಕ್ಕೆ ಅಂತಾರಾಷ್ಟ್ರೀಯ ವೈದ್ಯಕೀಯ ಮಹಾಮಂಡಳಿ ಯ ಫೆಲೋಶಿಪ್ ಪಡೆದಿರುವರು. ಗ್ರಾಮೀಣ ಸೇವೆಗಾಗಿ ಪ್ರತಿಷ್ಠಿತ ಡಾ.ಬಿ.ಸಿ.ರಾಯ್ ಪ್ರಶಸ್ತಿಗೆ ಭಾಜನರಾದವರು. ಇಲ್ಲಿಯವರೆಗೆ ೭೦ ಅಮೂಲ್ಯ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ್ದು, ಕನ್ನಡ ಸಾಹಿತ್ಯ ಪರಿ?Àತ್ತಿನ, ಅಕಾಡೆಮಿಯ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿರುವರು. ಪ್ರಶಸ್ತಿ ೫೦೦೦ ರೂ. ನಗದು, ಪ್ರಶಸ್ತಿ ಫಲಕ, ಸನ್ಮಾನ ಒಳಗೊಂಡಿದೆ. ನಾಡೋಜ, ಹಿರಿಯ ಸಾಹಿತಿ ಡಾ.ಬರಗೂರ ರಾಮಚಂದ್ರಪ್ಪ ಅವರು ಮೇ ೩೦ ರಂದು ಬೆಂಗಳೂರಿನ ಶೇಷಾದ್ರಿಪುರಂ ಅಡಿಟೋರಿಯಂ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.