Home ಜಿಲ್ಲೆ ವೀರಶೈವ ಸಮಾಜದಿಂದಲೇ  ನಗರದಲ್ಲಿ ಬಸವೇಶ್ವರ ಪುತ್ಥಳಿ: ಅಲ್ಲಂ ಪ್ರಶಾಂತ್

ವೀರಶೈವ ಸಮಾಜದಿಂದಲೇ  ನಗರದಲ್ಲಿ ಬಸವೇಶ್ವರ ಪುತ್ಥಳಿ: ಅಲ್ಲಂ ಪ್ರಶಾಂತ್

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.19: ನಗರದ ಬಸವೇಶ್ವರ  (ಹಳೇ ಕೆಇಬಿ) ಸರ್ಕಲ್ ನಲ್ಲಿ  ಅಶ್ವಾರೂಡ ಬಸವೇಶ್ವರನ ಕಂಚಿನ ಪುತ್ಥಳಿಯನ್ನು ತಮ್ಮ ಕುಟುಂಬದ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಮಾಜದ ಸಹಕಾರದಿಂದ ಮುಂದಿನ ವರ್ಷದ ಬಸವ ಜಯಂತಿಯೊಳಗೆ ಪ್ರತಿಷ್ಟಾಪನೆ ಮಾಡಲಿದೆಂದು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವೀರಶೈವ ಲಿಂಗಾಯತ ಸಮಾಜದ ಮುಖಂಡ ಅಲ್ಕಂ ಪ್ರಶಾಂತ್ ಅವರು ಹೇಳಿದ್ದಾರೆ.

ಬಸವ ಜಯಂತಿ ಆಚರಣೆ ಸಂಬಂಧ ನಗರದ ಶರಣ ಕರಡೀಶ್ ನಿಲಯದಲ್ಲಿ ಕರೆದಿದ್ದ ಸಮಾಜದ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು.  ಬಸವೇಶ್ವರ ಸರ್ಕಲ್ ಗೆ ಹೊಂದಿಕೊಂಡಂತೆ ಒಂದು ಭಾಗದಲ್ಲಿ  ನಮ್ಮ ಗಡಗಿ ಮನೆತನದ ನಿವೇಶನ ಇದೆ. ಇಲ್ಲಿ ಈಗಾಗಲೇ ಬಸವೇಶ್ವರ ವೃತ್ತ ಎಂದು ನಾಮಕರಣ ಮಾಡಿದ ಫಲಕ ಅಳವಡಿಸಿದೆ ಕಳೆದ ಬಸವ ಜಯಂತಿ ಸಂದರ್ಭದಲ್ಲಿ. ಇಲ್ಲಿ ವೀರಶೈವ ಲಿಂಗಾಯತ  ಸಮಾಜವೂ ಬಸವೇಶ್ವರ ಪುತ್ಥಳಿ ಸ್ಥಾಪನೆ ಮಾಡಲು ಬಯಸಿತ್ತು. ಆದರೆ ಈ ಕಾರ್ಯ ಈವರೆಗೆ ಆಗದ ಕಾರಣ, ನಮ್ಮ ಕುಟುಂಬದಿಂದ ಈ ಪುತ್ಥಳಿ ಸ್ಥಾಪನೆಗೆ ಸಂಕಲ್ಪ ಮಾಡಿದೆ. ಒಬ್ಬರೇ ಮಾಡುವುದಕ್ಕಿಂತ ಸಮಾಜದಿಂದ ಮಾಡುವುದು ಶ್ರೇಯಸ್ಸು ಎಂದು ನಾನು ಭಾವಿಸಿರುವೆ. ಸಮಾಜದವರು ಆರ್ಥಿಕವಾಗಿ  ಸಹಕಾರ ನೀಡಲಿ. ನೀಡದೇ ಇದ್ದರೂ ಸಹ  ತಾವು ಬಸವೇಶ್ವರ ಪುತ್ಥಳಿ ಪ್ರತಿಷ್ಟಾಪನೆ ಮಾಡಲು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಈ ವೇಳೆ  ಸಭೆ ಸೇರಿದ್ದ ಸಮಾಜದ ಮುಖಂಡರು ಸಮ್ಮತಿ ನೀಡಿದರು. ಅಲ್ಲದೆ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾವತಿ ವೀರೇಶ್ ಅವರು ಮಹಾಸಭಾದಿಂದ ಐದು ಲಕ್ಷ ರೂಗಳನ್ನು ನೀಡಲಿದೆಂದು ಘೋಷಣೆ ಮಾಡಿದರು.

ಸಮಾಜದ ಮುಖಂಡರುಗಳಾದ ಸಿರಿಗೇರಿ ಪನ್ನರಾಜ್, ಸಂಗನಕಲ್ಲು ಹಿಮಂತರಾಜ್, ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಬಿಚ್ಚುಗಲ್ಲು ಪಂಚಾಕ್ಷರಪ್ಪ. ಕರೇಗೌಡ, ಕೋರಿ ವಿರುಪಾಕ್ಷಿ,  ವೀರಶೈವ ತರುಣ ಸಂಘದ ಅಧ್ಯಕ್ಷ ನಂದೀಶ್ ಮಠಂ, ಮಹಾಲಿಂಗಯ್ಯ(ರಾಜಣ್ಣ) ಹೆಚ್.ತಿಮ್ಮನಗೌಡ, ಮೀನಳ್ಳಿ ಚಂದ್ರಶೇಖರ,  ಡಾ.ರೇಣುಕಾ ಮಂಜುನಾಥ, ಅಪ್ಪಯ್ಯ, ಎಂ.ಚಂದ್ರಮೌಳಿ, ಗಾಳಿ ರಾಜಶೇಖರ,  ಕೇಣಿ  ಬಸವರಾಜ್ , ಎಸ್.ಮಲ್ಲನಗೌಡ, ಗೌರಿಶಂಕರ ಸ್ವಾಮಿ, ಜಾಲಿಹಾಳ್ ಶ್ರೀಧರ್, ಡಿ.ಅರುಣ್ ಕುಮಾರ್,  ಸಿದ್ಮಲ್ ಮಂಜುನಾಥ  ಮೊದಲಾದವರು ಇದ್ದರು.