
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.22: ಸಹಾಯಕ ಆಯುಕ್ತ ಹೆಚ್.ಡಿ.ರಾಜೇಶ್ ನೇತೃತ್ವದಲ್ಲಿ ಇಂದು ಬೌದ್ಧ ಪೂರ್ಣಿಮೆಯಂದು ಬುದ್ದ ಜಯಂತಿಯನ್ನು ಆಚರಣೆ ಸಂಬಂಧ ಪೂರ್ವ ಸಿದ್ದತಾ ಸಭೆ ಡಿಸಿ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಸಂಜೆ 5 ಗಂಟೆಗೆ ಮುನಿಷಿಪಲ್ ಹೈಸ್ಕೂಲ್ ಮೈದಾನದಿಂದ ಬುದ್ದನ ಭಾವಚಿತ್ರದ ಮೆರವಣಿಗೆ ಯು ಸಮಾರಂಭ ನಡೆಯುವ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣಕ್ಕೆ ತೆರಳಿ 6.30 ರಿಂದ ವೇದಿಕೆ ಕಾರ್ಯಕಮ ನಡೆಸುವುದು.
ನಗರದ ನಾರಾಯಣರಾವ್ ಪಾರ್ಕ್ ನಲ್ಲಿ ಇರುವ ಬುದ್ದನ ಪ್ರತಿಮೆ ಹಾಳಾಗಿದೆ ಅದನ್ನು ತೆಗೆದು ಬೇರೆಯದನ್ನು ಪ್ರತಿಷ್ಟಾಪನೆ ಮಾಡಲು ಪಾಲಿಕೆಯವರಿಗೆ ತಿಳಿಸಬೇಕೆಂದು ತಿಳಿಸಲಾಯ್ತು.
ಶಿಕ್ಷಕ ಸುಗ್ಗೇನಹಳ್ಳಿ ರಮೇಶ್ ಅವರಿಂದ ಉಪನ್ಯಾಸ ಮಾಡಲು ಸೂಚಿಸಲಾಯ್ತು. ಬುದ್ದ ಅನುಯಾಯಿ ಕಮಲಾ ರತ್ನ ಬಂತೇಜಿ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲು ನಿರ್ಧರಿಸಿತು.
ಸಭೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ಮುಖಂಡರುಗಳಾದ ಎರ್ರೆಣ್ಣ, ಕಮಲಮ್ಮ, ಎನ್.ಡಿ.ವೆಂಕಮ್ಮ, ಅನಂತಕುಮಾರ್, ಶಂಕರ್ ನಂದಿಹಾಳ್, ಶಿವಕುಮಾರ್, ಚೇಳ್ಳಗುರ್ಕಿ ರಾಮಣ್ಣ, ಬಿ.ಎ.ಮಲ್ಲೇಶ್ವರಿ,ಸ್ವರೂಪ, ಶೇಖರಪ್ಪ , ಮೊದಲಾದವರು ಪಾಲ್ಗೊಂಡಿದ್ದರು.























