
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ. 22- ನಗರದ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರವನ್ನು ಕೋಲ್ಕತ್ತಾದ ಬೇಲೂರು ಮಠದ ರಾಮಕೃಷ್ಣ ಮಿಷನ್ಗೆ ಸೋಮವಾರ ಸಂಜೆ ಹಸ್ತಾಂತರ ಮಾಡಲಾಗಿದೆ.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ರಾಜ್ಯಸಭಾ ಮಾಜಿ ಸದಸ್ಯ ಕೆ.ಸಿ. ಕೊಂಡಯ್ಯ, ಶಾಸಕ ನಾರಾ ಭರತರೆಡ್ಡಿ, ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ, ಮೇಯರ್ ಪಿ. ಗಾದೆಪ್ಪ,
ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಯದ ಅಧ್ಯಕ್ಷ ಶ್ರೀಧರ ಬೋನಗೇರಿ, ಪದಾಧಿಕಾರಿಗಳಾದ ಪೃಥ್ವಿರಾಜ್ ಭೂಪಾಲ್, ಸಿ. ಎರ್ರಿಸ್ವಾಮಿ ಅವರು ಭಕ್ತಾಧಿಗಳ ಸಮ್ಮುಖದಲ್ಲಿ ಕೋಲ್ಕತ್ತಾದ ಬೇಲೂರು ಮಠದ ರಾಮಕೃಷ್ಣ ಮಿಷನ್ನ ಸಹ ಕಾರ್ಯದರ್ಶಿ ಸತ್ಯೇಶನಂದಾ, ಬೆಂಗಳೂರಿನ ಶಿವನಹಳ್ಳಿಯ ಮಹಾವಾಕ್ಯನಂದ ಮತ್ತು ಬಳ್ಳಾರಿಯ ಉಸ್ತುವಾರಿಗಳಾಗಿರುವ ಮಂಗಳನಾಥಾನಂದ ಅವರು ದಾಖಲೆಗಳನ್ನು ಹಸ್ತಾಂತರ ಮಾಡಿದರು.
ದಾಖಲೆಗಳನ್ನು ಸ್ವೀಕರಿಸಿದ ಶ್ರೀಗಳು ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರವನ್ನು ರಾಮಕೃಷ್ಣ ಮಿಷನ್ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಘೋಷಣೆ ಮಾಡಿದ್ದಾರೆ.
ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ, ನಾರಾ ಭರತರೆಡ್ಡಿ, ಜಿ. ಸೋಮಶೇಖರರೆಡ್ಡಿ ಅವರು ಮಾತನಾಡಿ, ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರವನ್ನು ಕೋಲ್ಕತ್ತಾದ ಬೇಲೂರು ಮಠದ ರಾಮಕೃಷ್ಣ ಮಿಷನ್ಗೆ ಹಸ್ತಾಂತರ ಮಾಡಲಾಗಿದ್ದು, ಬಳ್ಳಾರಿಯ ಆಶ್ರಮವು ರಾಷ್ಟ್ರೀಯ – ಅಂತಾರಾಷ್ಟ್ರೀಯಮಟ್ಟಕ್ಕೆ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಲೆಕ್ಸಿಕಪರಿಶೋದಕ ಸಿ. ಎರ್ರಿಸ್ವಾಮಿ ದಾನಿಗಳ ಕುರಿತು ಮಾಹಿತಿ ನೀಡಿದರು. ಶ್ರೀರಾಮಕೃಷ್ಣ ವಿವೇಕಾನಂದ ಸೆಂಟರ್ನ ಕಾರ್ಯದರ್ಶಿ ಜಗನ್ನಾಥ್ ಸ್ವಾಗತಿಸಿದರು. ಶಿಕ್ಷಕ ರಾಜಶೇಖರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಗಡಿಗಿ ರಾಕೇಶ್ ವಂದನಾರ್ಪಣೆ ಸಲ್ಲಿಸಿದರು.






















