Home ಜಿಲ್ಲೆ ನಾಗೇಂದ್ರ ಮತ್ತೆ ಸಚಿವರಾಗಲೆಂದು ಅಭಿಮಾನಿ ಶ್ರೀಶೈಲಕ್ಕೆ ಪಾದಯಾತ್ರೆ

ನಾಗೇಂದ್ರ ಮತ್ತೆ ಸಚಿವರಾಗಲೆಂದು ಅಭಿಮಾನಿ ಶ್ರೀಶೈಲಕ್ಕೆ ಪಾದಯಾತ್ರೆ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಮಾ.13: ಮಾಜಿ ಸಚಿವ ಹಾಗೂ ಬಳ್ಳಾರಿ ಗ್ರಾಮೀಣ ಶಾಸಕ  ಬಿ. ನಾಗೇಂದ್ರ ಅವರು ಮತ್ತೆ ಸಚಿವರಾಗಿ,  ಬಳ್ಳಾರಿ ಜಿಲ್ಲಾ ಉಸ್ತುವಾರಿಯಾಗಿ ಬರಲೆಂದು ಅವರ  ಅಭಿಮಾನಿ ತಾಲೂಕಿನ  ಬೆಣಕಲ್ಲು ಗ್ರಾಮದ  ದುರುಗಣ್ಣ ಇಲ್ಲಿಂದ  ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡಿದ್ದಾನೆ.