Home ಜಿಲ್ಲೆ ಮಂಗಳೂರು ಕನಸಿನಲ್ಲೂ ಗ್ರಹಿಸದ ‘ಅನುದಾನ’ ಶಾಸಕರಿಗೆ ಸನ್ಮಾನ

ಕನಸಿನಲ್ಲೂ ಗ್ರಹಿಸದ ‘ಅನುದಾನ’ ಶಾಸಕರಿಗೆ ಸನ್ಮಾನ

oplus_2

ಪುತ್ತೂರು: ಅಭಿವೃದ್ಧಿಯಲ್ಲಿ ರಾಜಕೀಯ ಮಾಡದ ಏಕೈಕ ಶಾಸಕ. ಮನವಿ ಕೊಟ್ಟು ನಾಲ್ಕೇ ತಿಂಗಳಿಗೆ ಅನುದಾನ ಮಂಜೂರು ಮಾಡುವ ಏಕೈಕ ಶಾಸಕರಿದ್ದರೆ ಅದು ಪುತ್ತೂರಿನ ಅಶೋಕ್ ರೈ. ಸತ್ತಿಕಲ್ ಒಡ್ಯದ ಕಯ ಎಂಬಲ್ಲಿ ಸೇತುವೆಗೆ ಹಣ ಮಂಜೂರಾಗುತ್ತದೆ. ನೂತನ ಸೇತುವೆಯಲ್ಲಿ ನಾವು ಓಡಾಡುತ್ತೇವೆ ಎಂಬ ನಂಬಿಕೆ ನಮಗೇ ಇರಲಿಲ್ಲ. ಆದರೆ ಅದನ್ನು ಸಾಬೀತು ಮಾಡಿದವರು ಅಶೋಕ್ ರೈ. ಇಚ್ಛಾಶಕ್ತಿ ಇದ್ದರೆ ಜನಪ್ರತಿನಿಧಿ ಹೇಗೆ ಕೆಲಸ ಮಾಡಬಹುದು ಎನ್ನವುದಕ್ಕೆ ಸಾಕ್ಷಿ ಈ ಶಾಸಕರು- ಇದು ಸತ್ತಿಕಲ್ ನಿವಾಸಿ ಪ್ರಗತಿಪರ ಕೃಷಿಕ ಗಂಗಾಧರ ರೈ ಅವರ ಮಾತು.
ಸತ್ತಿಕಲ್ ಒಡ್ಯದಗಯ ಸೇತುವೆಗೆ ಸೇತುವೆಗೆ ರೂ.೨.೪೦ ಕೋಟಿ ಮಂಜೂರು ಮಾಡಿದ ಶಾಸಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಈ ಹಿಂದೆ ಎಲ್ಲಾ ಶಾಸಕರಿಗೂ ನೀಡಿದಂತೆ ಇವರಿಗೂ ಮನವಿ ನೀಡಿದ್ದೆವು. ಡಿವಿಯಿಂದ ಹಿಡಿದು ಸಂಜೀವ ಮಠಂದೂರು ತನಕ ಯಾವ ಶಾಸಕರನ್ನೂ ಬಿಡಲಿಲ್ಲ. ಆದರೆ ಅವರಿಂದ ಭರವಸೆ ಮಾತ್ರ ಬಂದಿತ್ತು. ಆದರೆ ಭರವಸೆಯೇ ಕೊಡದೆ ನೇರವಾಗಿ ಸೇತುವೆಯನ್ನೇ ನೀಡಿದ ಅಶೋಕ್ ರೈ ಅವರನ್ನು ಮತ್ತಷ್ಟು ಕಾಲದ ಪುತ್ತೂರಲ್ಲಿ ಶಾಸಕರಾಗಿ ನಾವು ಉಳಿಸಿಕೊಳ್ಳಬೇಕು. ಇಲ್ಲವಾದರೆ ನಮಗೆ ದೊಡ್ಡ ನಷ್ಟವಾಗಲಿದೆ. ೪೦ ವರ್ಷಗಳ ಸೇತುವೆ ಹೋರಾಟಕ್ಕೆ ಈ ಶಾಸಕರಿಂದ ನ್ಯಾಯ ದೊರಕಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಇಂತಹ ಶಾಸಕರು ಸಿಕ್ಕಿದರೆ ನಿಜವಾದ ಅರ್ಥದಲ್ಲಿ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂದವರು ಹೇಳಿದರು.
ಸ್ಥಳೀಯರಾದ ವೆಂಕಟ್ರಮಣ ಭಟ್ ಅವರು ಮಾತನಾಡಿ, ಕನಸಿನಲ್ಲಿಯೂ ಗ್ರಹಿಸದ ಅನುದಾನ ನಮ್ಮ ಸೇತುವೆಗೆ ಬಂದಿದೆ. ನಮ್ಮ ಬೇಡಿಕೆ ಈಡೇರಿದೆ. ಇದು ಪುತ್ತೂರಿನ ಶಾಸಕರಿಂದ ಮಾತ್ರ ಸಾಧ್ಯ. ಏನೇ ಬರಲಿ. ಶಾಸಕರ ಜತೆಗೆ ನಾವಿದ್ದೇವೆ. ನಮ್ಮ ಎಲ್ಲರ ಬೆಂಬಲ ಅವರಿಗಿದೆ. ಭರವಸೆ ಕೊಟ್ಟು ಮಂಗ ಮಾಡುವ ಜನಪ್ರತಿನಿಧಿಗಳಿಂದ ನಮಗೆ ಅಭಿವೃದ್ಧಿಪರ ಚಿಂತನೆಯ ಅಭಿವೃದ್ಧಿ ಹರಿಕಾರರಾದ ಇಂತಹ ಶಾಸಕರು ಬೇಕು ಎಂದರು.
ಈ ಸಂದರ್ಭ ಗ್ರಾಮಸ್ಥರು ಶಾಸಕರನ್ನು ಶಾಲು ಹೊದಿಸಿ, ಫಲಪುಷ್ಪವನ್ನು ನೀಡಿ ಸನ್ಮಾನಿಸಿದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಕಾಂಗ್ರೆಸ್ ಮುಖಂಡ ರೋಶನ್ ರೈ ಬನ್ನೂರು ಸ್ಥಳೀಯರಾದ ನಾರಾಯಣ ಭಟ್, ಕೃಷ್ಣಪ್ರಸಾದ್, ರಾಜೇಶ್ ಗೌಡ, ತನಿಯಪ್ಪ ಗೌಡ, ಸೇಸಪ್ಪ ಗೌಡ, ಶ್ವೇತಾ, ಸುಂದರ ಗೌಡ, ರಾಮಚಧಂರ ಭಟ್, ವಿರೂಪಾಕ್ಷ ಭಟ್, ನಾರಾಯಣ ಭಟ್ ವಿ, ರಾಮನಾಯ್ಕ, ಜಾನಕಿ, ಎಂ , ಪ್ರವೀಣ್ ನಾಯ್ಕ, ಹರೀಶ್ ಮೂಲ್ಯ, ಹರಿಗಣೇಶ್ ,ಕೃಷ್ಣಪ್ಪ ಮೂಲ್ಯ, ಭರತ್ ಮೂಲ್ಯ, ಸರಸ್ವತಿ, ಭಾರತಿ ವೆಂಕಟ್ರಮಣ ಭಟ್ ಸೇರಿದಂತೆ ಸತ್ತಿಕ್ಕಲ್ ಒಡ್ಯದಕಯ ಸೇತುವೆಯ ಫಲಾನುಭವಿಗಳು ಉಪಸ್ಥಿತರಿದ್ದರು.

ಆಶೀರ್ವಾದವೇ ಸನ್ಮಾನ
ಸತ್ತಿಕಲ್ ಒಡ್ಯದ ಗಯ ಗ್ರಾಮಸ್ಥರು ನಾಲ್ಕು ತಿಂಗಳ ಹಿಂದೆ ನನ್ನ ಕಚೇರಿಗೆ ಬಂದು ಸೇತುವೆಯ ಸಮಸ್ಯೆಯ ಬಗ್ಗೆ ಹೇಳಿದ್ದರು. ಜನರ ಸಂಕಷ್ಟವನ್ನು ಅರಿತು ಈ ವಿಚಾರವನ್ನು ಸಚಿವರ ಗಮನಕ್ಕೆ ತಂದು ಸತ್ತಿಕಲ್ ಸೇರಿದಂತೆ ಒಟ್ಟು ನಾಲ್ಕು ಕಡೆಗೆ ಸೇತುವೆ ಮಂಜೂರಾಗಿದೆ. ಸತ್ತಿಕಲ್ ಭಾಗದ ಜನತೆಯ ೪೦ ವರ್ಷಗಳ ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದು ಭಾವಿಸಿದ್ದೇನೆ. ಮುಂದಿನ ದಿನಗಳಲ್ಲಿ ಆಶೀರ್ವಾದ ಮಾಡಿದರೆ ಅದುವೇ ನನಗೆ ನೀಡುವ ದೊಡ್ಡ ಸನ್ಮಾನವಾಗಿದೆ- ಅಶೋಕ್ ರೈ