
ಮುಂಬೈ, ಜ,31:– ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕರಿಸುವ ಬಗ್ಗೆ ತಮ್ಮ ಜೊತೆ ಯಾವುದೇ ಚರ್ಚೆ ನಡೆಸಿಲ್ಲ ಅದು ಅವರ ಪಕ್ಷ ತೆಗೆದುಕೊಂಡ ನಿರ್ಧಾರ ಎಂದು ಎನ್‍ಸಿಪಿ- ಎಸ್‍ಪಿ ಪಕ್ಷದ ವರಿಷ್ಠ ಶರದ್ ಪವಾರ್ ಹೇಳಿದ್ದಾರೆ.
ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆಯೇ ಎಂಬುದು ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. “ನನಗೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.ಅವರ ಪಕ್ಷ ನಿರ್ಧರಿಸಿರಬೇಕು, ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಾರೆ ಎನ್ನುವ ವಿಷಯವನ್ನು ಪತ್ರಿಕೆಯಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾದ ಪ್ರಫುಲ್ ಪಟೇಲ್ ಮತ್ತು ಸುನಿಲ್ ತಟಕರೆ ಅವರಂತಹ ಹಿರಿಯರು ನಿರ್ಧಾರ ಮಾಡುತ್ತಾರೆ. ತಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ
ಎನ್‍ಸಿಪಿಯ ಮತ್ತೊಂದು ಬಣದಲ್ಲಿ ಏನು ನಡೆಯುತ್ತಿದೆ ಎನ್ನುವ ಬಗ್ಗೆ ತಮಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ, ತಮ್ಮೊಂದಿಗೆ ಯಾರೂ ಕೂಡ ಚರ್ಚೆ ನಡೆಸಿಲ್ಲ. ಜೊತೆಗೆ ಅವರ ಬಣದಲ್ಲಿ ಏನು ನಡೆಯುತ್ತಿದೆ ಎನ್ನುವುದೂ ಕೂಡ ತಿಳಿದಿಲ್ಲ ಎಂದು ಹೇಳಿದ್ದಾರೆ
ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಸೇರುವ ಸುನೇತ್ರಾ ಪವಾರ್ ಸೇರುವ ಕುರಿತ ನಿರ್ಧಾರದ ಬಗ್ಗೆ ಎನ್‍ಸಿಪಿ (ಎಸ್‍ಪಿ) ನಾಯಕತ್ವ ಮತ್ತು ಶರದ್ ಪವಾರ್ ಅವರ ಕುಟುಂಬಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ಕಳೆದ ನಾಲ್ಕು ತಿಂಗಳುಗಳಿಂದ ಅಜಿತ್ ಪವಾರ್ ಮತ್ತು ಜಯಂತ್ ಪಾಟೀಲ್ ನೇತೃತ್ವದಲ್ಲಿ ಎರಡು ಎನ್‍ಸಿಪಿ ಬಣಗಳ ವಿಲೀನದ ಮಾತುಕತೆ ನಡೆಯುತ್ತಿತ್ತು, ಶರದ್ ಪವಾರ್ ಅವರ ಸಹೋದರ ಸಂಬಂಧಿ ಅಜಿತ್ ಪವಾರ್ ಮರಣದ ನಂತರ ವಿಲೀನಕ್ಕೆ ವೇಗ ಬಂದಿರುವ ನಡುವೆಯೇ ಸಂಜೆ ಅಧಿಕಾರ ಸ್ವೀಕಾರ ನಡೆಯುತ್ತಿದೆ.
ಅಜಿತ್ ಪವಾರ್, ಶಶಿಕಾಂತ್ ಶಿಂಧೆ ಮತ್ತು ಜಯಂತ್ ಪಾಟೀಲ್ ಎರಡೂ ಬಣಗಳ ವಿಲೀನದ ಬಗ್ಗೆ ಮಾತುಕತೆ ಆರಂಭಿಸಿದ್ದರು. ವಿಲೀನ ದಿನಾಂಕವನ್ನು ಸಹ ನಿಗದಿಪಡಿಸಲಾಗಿತ್ತು ಅದನ್ನು ಫೆಬ್ರವರಿ 12 ರಂದು ನಿಗದಿಪಡಿಸಲಾಗಿತ್ತು. ದುರದೃಷ್ಟವಶಾತ್, ಅಜಿತ್ ಅದಕ್ಕೂ ಮೊದಲು ನಮ್ಮನ್ನು ತೊರೆದರು” ಎಂದು ಪಕ್ಷದ ಉನ್ನತ ಮೂಲಗಳು ಮಾಹಿತಿ ನೀಡಿವೆ. 2023ರ ಜುಲೈ ತಿಂಗಳಲ್ಲಿ ಅಜಿತ್ ಪವಾರ್ ಪಕ್ಷದ 54 ಶಾಸಕರಲ್ಲಿ 40 ಕ್ಕೂ ಹೆಚ್ಚು ಶಾಸಕರನ್ನು ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರಕ್ಕೆ ಸೇರಿಸಿಕೊಂಡಾಗ ಎನ್‍ಸಿಪಿ ವಿಭಜನೆಯಾಯಿತು. ವಿಭಜನೆಯ ನಂತರ, ಶರದ್ ಪವಾರ್ ತಮ್ಮ ಬಣವನ್ನು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ – ಶರದ್ಚಂದ್ರ ಪವಾರ್ ಎಂದು ಹೆಸರು ನಾಮಕರಣ ಮಾಡಿಕೊಂಡಿದ್ದರು
ಈ ನಡುವೆ ಖಾಲಿ ಇರುವ ಉಪಮುಖ್ಯಮಂತ್ರಿ ಹುದ್ದೆಯ ಕುರಿತು ಎನ್‍ಸಿಪಿಯ ನಿರ್ಧಾರವನ್ನು ಮಹಾಯುತಿ ಮೈತ್ರಿಕೂಟ ಬೆಂಬಲಿಸುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
“ಈ ನಿರ್ಧಾರವನ್ನು ಎನ್‍ಸಿಪಿ ತೆಗೆದುಕೊಳ್ಳುತ್ತದೆ. ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ. ಅಜಿತ್ ಪವಾರ್ ಮತ್ತು ಎನ್‍ಸಿಪಿಯ ಕುಟುಂಬಕ್ಕೆ ಬೆಂಬಲ ನೀಡುತ್ತೇವೆ” ಎಂದು ಹೇಳಿದ್ದಾರೆ.


























