
ಕೆಂಗೇರಿ, ನ. ೨೦:ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ ವಾರ್ಡಿನ ಅಂಜನಾ ನಗರದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಮಾಜಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಎಚ್. ವಿ. ಚಂದ್ರಬಾಬು ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು. ದಿನಾಂಕ ೧೪.೧೨.೨೦೨೫ ಭಾನುವಾರದಂದು ನಗರದ ಚಂದ್ರ ಲೇಔಟ್ ಬಡಾವಣೆಯ ಸಿದ್ದಗಂಗಾ ಶಾಲೆಯಲ್ಲಿ ಐದು ವರ್ಷದ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದ್ದು ಸಂಘದ ಸದಸ್ಯರು ೧೦೩ ವರ್ಷ ಇತಿಹಾಸ ಇರುವ ರಾಜ್ಯ ಪ್ರಸಿದ್ಧ ಸಂಘದ ಚುನಾವಣೆ ಗೆ ತಪ್ಪದೇ ಹಾಜರಾಗಿ ಆರ್. ಆರ್. ತಂಡದ ಅಭ್ಯರ್ಥಿಗೆ ಮತದಾನ ಮಾಡುವ ಮೂಲಕ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.
ಬೆಂಗಳೂರಿನಲ್ಲಿ ಸದಸ್ಯರ ಅನುಕೂಲಕ್ಕಾಗಿ ಸಮುದಾಯ ಭವನವನ್ನು ನಿರ್ಮಿಸಲಾಗುವುದು ಹಾಗೂ ಜಿಲ್ಲಾ ಮಟ್ಟದ ಸಂಘದ ಸಮಿತಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಧ ನ ಸಹಾಯ ಮಾಡಲಾಗುವುದು ಎಂದರು. ಸಂಘದ ಸದಸ್ಯರ ಶ್ರೇಯ ಅಭಿವೃದ್ಧಿ ಶ್ರಮಿಸುತ್ತಿದ್ದ ಆಡಳಿತ ಮಂಡಳಿ ವಿರುದ್ಧ ಅಸೂಯೆ, ದ್ವೇಷದಿಂದ ವಿನಾಕಾರಣ ವಿರೋಧಿಗಳ ಬಣ ಕೋರ್ಟು ಕಚೇರಿಗೆ ದೂರನ್ನು ದಾಖಲಿಸಿ ಗುತ್ತಿಗೆದಾರರ ಹಿತ ಕಾಪಾಡಲು ಅವಕಾಶ ನೀಡದೆ, ಹೆಜ್ಜೆ ಹೆಜ್ಜೆಗೂ ತೊಂದರೆ ನೀಡಿ, ಸದಸ್ಯರ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಹಿನ್ನಡೆ ಯಾಗಿದೆ ಸಂಘದ ಸದಸ್ಯರು ಇದನೆಲ್ಲ ಗಮನಿಸುತ್ತಿದ್ದು ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಖಜಾಂಚಿ ಚಂದ್ರಬಾಬು ಕೇಂದ್ರ ಕಾರ್ಯಕಾರಿ ಮಾಜಿ ಸದಸ್ಯ ತಿರುಮಲಾದ್ರಿ ಲೋಕೇಶ್, ಮಹದೇವ್, ಶಾಮ್ ಸುಂದರ್, ಹರೀಶ್, ಮುನಿರಾಜು, ದಿನೇಶ್, ಆರ್ ಆರ್ ತಂಡದ ನಾಯಕರು ಉಪಸಿತರಿದ್ದರು.































