ವಿಟ್ಲ ಪ್ರಶಸ್ತಿ ವಿಜೇತ ಯುವಕ ಮಂಡಲ ಇದರ ೪೮ ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವ

ವಿಟ್ಲ ಪ್ರಶಸ್ತಿ ವಿಜೇತ ಯುವಕ ಮಂಡಲ ಇದರ ೪೮ ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವ ನಡೆಸಲಾಯಿತು. ಈ ಮೊಸರು ಕುಡಿಕೆ ಉತ್ಸವವನ್ನು ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಎಕ್ಸಿಸ್ ಬ್ಯಾಂಕ್ ಪ್ರಭಂದಕ ಕೃಷ್ಣ ಕಿಶೋರ್ ಭಟ್, ಬೆಳ್ಳಾರೆ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಓ ಸೊಸೈಟಿ ಸೀನಿಯರ್ ಮ್ಯಾನೇಜರ್ ಚಂದ್ರಹಾಸ ಶೆಟ್ಟಿ ಪಿಲಿಂಜ, ಇಡ್ಕಿದು ಸೇವಾ ಸಹಕಾರಿ ಸಂಘದ ನಿವೃತ್ತ ಸಿ ಇ ಒ ಈಶ್ವರ ನಾಯ್ಕ್ ವಿಟ್ಲ ಸುಬ್ರಹ್ಮಣ್ಯ ಸಹಕಾರಿ ಸಂಘದ ವ್ಯವಸ್ಥಾಪಕ ರಾಜೇಶ್ ಇವರು ಭಾಗವಹಿಸಿದ್ದರು.
ಯುವಕ ಮಂಡಲದ ಅಧ್ಯಕ್ಷ ಸುಧೀರ್ ನಾಯ್ಕ ಸ್ವಾಗತಿಸಿದರು. ಕೋಶಾಧಿಕಾರಿ ಜನಾರ್ದನ ಪದ್ಮಶಾಲಿ ವಂದಿಸಿದರು. ಸುದರ್ಶನ್ ಪಡಿಯಾ ನಿರೂಪಿಸಿದರು. ಗೌರವ ಅಧ್ಯಕ್ಷ ಬಿ ಎಸ್ ರಮೇಶ್. ಕಾರ್ಯದರ್ಶಿ ಗಂಗಾಧರ ವೇದಿಕೆಯಲ್ಲಿ ಉಪಸ್ಥಿತರಿದ್ದರು