
ಸಂಜೆವಾಣಿ ನ್ಯೂಸ್
ಮೈಸೂರು: ಜೂ.25:- ರಾಜ್ಯದಲ್ಲಿ ಭÀ್ರಷ್ಟಾಚಾರ ಮಿತಿ ಮೀರಿದೆ. ಆದರೆ, ಸಿದ್ದರಾಮಯ್ಯ ಯಾವುದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದರು.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಯಾವುದನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಬಿಜೆಪಿಯವರನ್ನು ಕಳ್ಳ ಎನ್ನುವ ಸಿದ್ದರಾಮಯ್ಯನೇ ಕಳ್ಳ. ಸಿದ್ದರಾಮಯ್ಯ ರಾಜ್ಯವನ್ನು ಹರಾಜು ಹಾಕಿz್ದÁರೆ ಎಂದು ಕಿಡಿಕಾರಿದರು.
ವಸತಿ ಇಲಾಖೆಯಲ್ಲಿನ ಅಕ್ರಮದ ಬಗ್ಗೆ ಮಾತನಾಡಿ, ವಸತಿ ಮನೆಗಳ ಹಂಚಿಕೆಯಲ್ಲಿ ಆಶ್ರಯ ಸಮಿತಿಯೇ ಪರಮೋಚ್ಚ. ಆಶ್ರಯ ಸಮಿತಿ, ಶಾಸಕರ ಹಂತದ¯್ಲÉೀ ಮನೆಗಳು ಮಾರಾಟ ಆಗುತ್ತವೆ. ಕಾಮಗಾರಿಯಲ್ಲಿ ಸಚಿವರಿಗೆ ಶೇ.10 ಕಮಿಷನ್ ಹೋಗುತ್ತದೆ. ಕೆಲಸ ಮುಗಿಸುವವರೆಗೆ ಶೇ.25 ಆಗುತ್ತದೆ. ಮನೆಗಳ ಹಂಚಿಕೆಯಲ್ಲಿ ಆಶ್ರಯ ಸಮಿತಿ ಗ್ರಾಮಸಭೆ ಮೂಲಕ ಆಯ್ಕೆ ಆಗಬೇಕು ಎಂದರು.
ವಸತಿ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಸ್ವತಃ ಶಾಸಕ ಬಿ.ಆರ್. ಪಾಟೀಲ್ ಧÀ್ವನಿ ಎತ್ತಿz್ದÁರೆ. ಶಾಸಕ ರಾಜು ಕಾಗೆ ಕೂಡ ರಾಜ್ಯ ಸರ್ಕಾರದ ಭÀ್ರಷ್ಟಾಚಾರದ ಬಗ್ಗೆ ಮಾತನಾಡಿz್ದÁರೆ. ಸಿದ್ದರಾಮಯ್ಯ ಭÀ್ರಷ್ಟಾಚಾರದ ವಿರುದ್ಧ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಮದ್ಯದ ಬೆಲೆ ಜಾಸ್ತಿ ಮಾಡಿದ್ದು ಕುಡಿಯೋರು ಕಡಿಮೆ ಆಗಲಿ ಅಂತಾ ಮಾಡಿದ್ದು ಅಂತಾರೆ. ಮದ್ಯದ ಬೆಲೆ ಏರಿಕೆ ಮಾಡಿದ ಮಾತ್ರಕ್ಕೆ ಕುಡಿಯುವವರು ಕಡಿಮೆಯಾಗಿಲ್ಲ.ಯುವಕರು ಗಾಂಜಾ ಅಫೀಮು ಮೊರೆ ಹೋಗುತ್ತಿz್ದÁರೆ. ಗಾಂಜಾ, ಅಫೀಮು ಎ¯್ಲÁ ಕಡೆ ಹೆಚ್ಚಾಗಿದೆ. ಇದರ ಚಟ ಯುವಕರನ್ನು ಬಲಿ ತೆಗೆದು ಕೊಳ್ಳುತ್ತಿದೆ. ಸಿಗರೇಟು ಸೇದುತ್ತಿದ್ದವರು ಗಾಂಜಾ ಹೊಡೆಯುತ್ತಿz್ದÁರೆ. ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ರಾಜ್ಯ ಹಾಳಾಗಿ ಹೋಯಿತು ಎಂದು ಹೇಳಿದರು.
ಜೂ.26ರಂದು ದಸರಾ ಆಚರಣೆ ಸಂಬಂಧÀ ಹೈ ಪವರ್ ಕಮಿಟಿ ಮೀಟಿಂಗ್ ಇದೆ. ಅಧಿಕಾರಿಗಳು ಸಿಎಂ ಅವರನ್ನೇ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಅರಮನೆಗೆ ಉಪನಿರ್ದೇಶಕರೇ ಲೀಡರ್ ಆಗಿz್ದÁರೆ. ಅರಮನೆ ನಿರ್ವಹಣೆಯನ್ನು ಮಹಾರಾಜರಿಗೆ ಕೊಡೋದು ಒಳ್ಳೆಯದು ಎಂದರು.
ಅರಮನೆ ಆಡಳಿತ ಮಂಡಳಿಗೆ ಕೆಎಎಸ್ ಅಧಿಕಾರಿಯನ್ನು ನೇಮಕ ಮಾಡಬೇಕು ಅಂತ ಇದೆ. ಆದರೆ, ಆ ವ್ಯಕ್ತಿಯನ್ನು ಬದಲು ಮಾಡಲು ಇವರು ಬಿಡುತ್ತಿಲ್ಲ. ಅರಮನೆಗೆ ಬರುವ ಪ್ರವಾಸಿಗರ ಟಿಕೆಟ್ ದರ ಏರಿಕೆ ಮಾಡಲಾಗಿದೆ. ಇದನ್ನು ಕೇಳುವವರು ಯಾರು ಇಲ್ಲ ಎಂದು ಕಿಡಿಕಾರಿದರು.
ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಗೆ ಕೆಲ ಶಾಸಕರು ಸ್ಪರ್ಧಿಸಿರುವ ವಿಚಾರವಾಗಿ ಮಾತನಾಡಿ, ಶಾಸಕ ಜಿ.ಟಿ. ದೇವೇಗೌಡ, ಅವರ ಪುತ್ರ ಹರೀಶ್ ಗೌಡ ಸಹಕಾರ ಕ್ಷೇತ್ರದಲ್ಲಿ ಈ ಮೊದಲಿನಿಂದಲೂ ಇz್ದÁರೆ. ಸಹಕಾರ ಕ್ಷೇತ್ರದಲ್ಲಿ ಇವರ ಹಿಡಿತ ತಪ್ಪಿಸಬೇಕು. ಕಾಂಗ್ರೆಸನ್ನು ಅಧಿಕಾರಕ್ಕೆ ತರಬೇಕು ಅಂತ ಸಿದ್ದರಾಮಯ್ಯ ಈ ರೀತಿ ಮಾಡಿಸುತ್ತಿz್ದÁರೆ ಎಂದರು.
ಕಾರ್ಯಕರ್ತರು ಚುನಾವಣೆಗೆ ನಿಂತರೆ ಹಣದ ಕೊರತೆ ಆಗುತ್ತದೆ. ಶಾಸಕರೇ ಚುನಾವಣೆಗೆ ನಿಂತರೆ ಯಥೇಚ್ಛವಾಗಿ ಹಣ ಖರ್ಚು ಮಾಡುತ್ತಾರೆ. ಸಹಕಾರ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಕುಟುಂಬದ ಪ್ರಾಬಲ್ಯ ಮುಗಿಸುವುದು ಸಿಎಂ ಸಿದ್ದರಾಮಯ್ಯ ಪ್ಲಾನ್ ಇರಬೇಕು ಎಂದು ಹೇಳಿದರು.