
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,ಏ.22 : ನಗರದ ಕೇಂದ್ರ ಬಸ್ ನಿಲ್ದಾಣದ ಬೈಕ್ ಪಾರ್ಕಿಂಗ್ ಪ್ರದೇಶದಲ್ಲಿನ ಬೃಹತ್ ಮರವೊಂದು ನಿನ್ನೆ ರಾತ್ರಿ ಬೀಸಿದ ಬಿರುಗಾಳಿಗೆ ಉರುಳಿ ಬಿದ್ದಿದ್ದು ಹತ್ತಾರು ಬೈಕ್ ಗಳು ಜಖಂಗೊಂಡಿವೆ.
ಕಳೆದೊಂದು ವಾರದಿಂದ ನಗರದಲ್ಲಿ ಬಿಸಿಲು ಮೀತಿ ಮೀರಿತ್ತು. ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಹವಾಮಾನ ದಲ್ಲಿ ಬದಲಾವಣೆಯಾಗಿ ಭಾರಿ ಬಿರುಗಾಳಿ ಬೀಸಿತು. ಇದರ ಪರಿಣಾಮ ಬೃಹತ್ ಮರ ಧರೆಗುರುಳಿದೆ.
ಮರ ಬಿದ್ದ ಪರಿಣಾಮ ಇಪ್ಪತ್ತಕ್ಕೂ ಹೆಚ್ಚು ಬೈಕ್ ಗಳು ಜಖಂ ಅಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಬೆಳಿಗ್ಗೆ ಮರ ತೆರವು ಕಾರ್ಯ ನಡೆಸಿದ ಪಾಲಿಕೆ ಸಿಬ್ಬಂದಿಯಿಂದ ನಡೆಯಿತು.
ಬೈಕ್ ಗಳು ಜಖಂ ಅಗಿದೆ ಇದಕ್ಕೆ ಯಾರು ಹೊಣೆ.ಇದರಲ್ಲಿ ಅನೇಕ ಬೈಕ್ ಗಳಿಗೆ ಇನ್ಷರೆನ್ಸ್ ಇಲ್ಲದ ಹಿನ್ನೆಲೆ ವಾಹನ ದುರಸ್ತಿ ಮಾಡಿಸೋರು ಯಾರು ಎನ್ನುವದು ದೊಡ್ಡ ಪ್ರಶ್ನೆಯಾಗಿದೆ..
ನಷ್ಟದ ಅಂದಾಜು ಮಾಡುತ್ತಿರುವ KSRTC ಅಧಿಕಾರಿಗಳು ಮತ್ತು ಪಾರ್ಕಿಂಗ್ ಸೆಂಟರ್ ಪಡೆದವರು..ವಾಹನ ದುರಸ್ತಿ ಜವಾಬ್ದಾರಿ ಪಾರ್ಕಿಂಗ್ ನವರದ್ದು ಎನ್ಮವದು ವಾಹನ ಸವಾರರ ಅಗ್ರಹವಾಗಿದೆ. ಆದರೆ ಪಾರ್ಕಿಂಗ್ ನವರು ನಮ್ಮದೇನಿದ್ದರೂ ಬೈಕ್ ರಕ್ಷಣೆ ಅಷ್ಟೇ ಪ್ರಕೃತಿ ವಿಕೋಪದಿಂದಾದ ನಷ್ಟ ನಮಗೆ ಬರಲ್ಲ ಎನ್ನುತ್ತಿದ್ದಾರೆ.






















