Home ಜಿಲ್ಲೆ ಪರಿಸರ ಸ್ವಚ್ಚತೆಯ ಕರ್ತವ್ಯ ಮೆರೆದ ಮೋದಿ ಶಾಲೆಯ ಸಿಬ್ಬಂದಿ

ಪರಿಸರ ಸ್ವಚ್ಚತೆಯ ಕರ್ತವ್ಯ ಮೆರೆದ ಮೋದಿ ಶಾಲೆಯ ಸಿಬ್ಬಂದಿ

Oplus_16908288

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.21: ನಗರದಲ್ಲಿ ನಿನ್ನೆ ಸಂಜೆ ಮುನಿಷಿಪಲ್ ಹೈಸ್ಕೂಲ್ ಮೈದಾನದಿಂದ ರಂಗಮಂದಿರದವರೆಗೆ ನಡೆದ ಬಸವ ಜಯಂತಿಯ ಭಾವಚಿತ್ರದ ಮೆರವಣಿಗೆಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಎಸ್.ಕೆ.ಮೋದಿ ಶಾಲೆಯ ಸಿಬ್ಬಂದಿ ಪರಿಸರ ಸ್ವಚ್ಚತೆಯ ಕರ್ತವ್ಯ ಮೆರೆದಿದ್ದಾರೆ.

ಮೆರೆವಣಿಗೆ ವೇಳೆ ಬಿಸಿಲ ದಾಹ ತಣಿಸಲೆಂದು ಉತ್ಸವ ಸಮಿತಿ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಮಜ್ಜಿಗೆ ಪಾಕೆಟ್ ಗಳನ್ನು ವಿತರಿಸಿತ್ತು. ಮಜ್ಜಿಗೆ ಕುಡಿದ ಜನ ಪ್ಲಾಸ್ಟಿಕ್ ಪಾಕೆಟ್ ಗಳನ್ನು ಕಸದಂತೆ ಹಾದಿಯುದ್ದಕ್ಕೂ ಬೀಸಾಡಿದ್ದರು.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮೋದಿ ಶಾಲೆಯ ಸಿಬ್ಬಂದಿ ಪರಿಸರ ಅಸ್ವಚ್ಚತೆಯನ್ನು ಮನಗಂಡು ರಸ್ತೆಯಲ್ಲಿ ಬೀಸಾಡಿದ್ದ ಮಜ್ಜಿಗೆ ಪಾಕೆಟ್ ಗಳನ್ನು ಸಂಗ್ರಹಿಸಿ ಕಸ ಸಂಗ್ರಹದ ತೊಟ್ಟಿಗೆ ಹಾಕಿದ್ದು ಗಮನ ಸೆಳೆಯಿತು.

ಸ್ವಚ್ಛ “”ಪರಿಸರ ನಮ್ಮದು – ಅದನ್ನು ಕಾಪಾಡುವುದು ನಮ್ಮ ಕರ್ತವ್ಯ” ಎಂಬ ಸಂದೇಶವನ್ನು ಎಲ್ಲರಿಗೂ ಸಾರಿದಂತೆ ಇತ್ತು ಅವರ ಕೆಲಸ.

g12