
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.15: ತಾಲೂಕಿನ ಸಿಂಧುವಾಳ ಗ್ರಾಮದಲ್ಲಿ ವೀರಭದ್ರೇಶ್ವರ ದೇವರ ನೂತನ ಶಿಲಾ ದೇವಾಲಯ ನಿರ್ಮಾಣ ಮಾಡಿದ್ದು ಅದನ್ನು ನಾಡಿದ್ದು ಏ.23 ರಂದು ಉದ್ಘಾಟಿಸುವ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಗಣಪತಿ, ವೀರಭದ್ರೇಶ್ವರ ಸ್ವಾಮಿ, ಜಗಜ್ಯೋತಿ ಬಸವೇಶ್ವರ, ಮತ್ತು ನಂದೀಶ್ವರ ಶಿಲಾವಿಗ್ರಹಗಳನ್ನು ಈ ನೂತನ ದೇವಾಲಯದಲ್ಲಿ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮ ಮತ್ತು ಕಳೆದ ಮಾ.19 ರಿಂದ ಹಮ್ಮಿಕೊಂಡಿರುವ ಕಲಬುರ್ಗಿ ಶರಣ ಬಸವೇಶ್ವರ ಪುರಾಣ ಪ್ರವಚನದ ಮಹಾಮಂಗಲ ಕಾರ್ಯಕ್ರಮ
ಅಜಾತ ತಂಭುಲಿಂಗ ಶಿವಾಚಾರ್ಯ ಸ್ವಾಮಿಗಳು, ಪುರವರ್ಗ ಮಠ, ಜಂಗಮರ ಹೊಸಳ್ಳಿ ಹಾಗು ನಾಡಿನ ವಿವಿಧ ಮಠಾಧೀಶರ ಸಮ್ಮುಖದಲ್ಲಿ ನಡೆಯಲಿದೆ.
ಏ.23 ರಂದು ಬೆಳಗಿನ ಜಾವ ವಿಗ್ರಹಗಳ ಪ್ರಾಣ ಪ್ರತಿಷ್ಟಾಪನೆ, ಸಂಜೆ 4 ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಂತರ ಧರ್ಮಸಭೆ ನಡೆಯಲಿದೆ. ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಸಹ ಆಗಮಿಸಲಿದ್ದಾರೆಂದು ದೇವಸ್ಥಾನದ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.





















