ನನ್ನ ಪತಿ ನನ್ನ ತಾಯಿಗಿಂತ ವಯಸ್ಸಿನಲ್ಲಿ ದೊಡ್ಡವರು

ವಾಷಿಂಗ್ಟನ್,ನ.20:-ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೆವಿಟ್ ಕೇವಲ 28 ವರ್ಷ ವಯಸ್ಸಿನವರು, ಆದರೆ ಅವರು 60 ವರ್ಷದ ನಿಕೋಲಸ್ ರಿಚಿಯೊ ಅವರನ್ನು ವಿವಾಹವಾಗಿದ್ದಾರೆ. ಇಬ್ಬರ ನಡುವೆ ಅಗಾಧ ವಯಸ್ಸಿನ ವ್ಯತ್ಯಾಸ ಇರುವುದರಿಂದ ಈ ವಿವಾಹವು ಆಗಾಗ್ಗೆ ಚರ್ಚೆಯ ವಿಷಯವಾಗಿದೆ. ಈಗ ಕ್ಯಾರೋಲಿನ್ ಪಾಡ್‍ಕ್ಯಾಸ್ಟ್‍ನಲ್ಲಿ ಇದರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ನಮ್ಮ ನಡುವೆ ಇಷ್ಟೊಂದು ದೊಡ್ಡ ವಯಸ್ಸಿನ ವ್ಯತ್ಯಾಸವಿರುವುದು ಅಸಾಮಾನ್ಯ-ಅಸಹಜ ಎಂದು ಎಲ್ಲರೂ ಭಾವಿಸಿದ್ದಾರೆ. ನನ್ನ ಪತಿ ನನ್ನ ತಾಯಿಗಿಂತ ದೊಡ್ಡವರು. ಆರಂಭದಲ್ಲಿ ನನ್ನ ಹೆತ್ತವರು ಈ ಮದುವೆಗೆ ತೀವ್ರ ಅಸಮಾಧಾನ ಮತ್ತು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.


ನಿಮ್ಮ ವಯಸ್ಸಿನ ಹುಡುಗರಿಗೆ ಇನ್ನೂ ಪ್ರಬುದ್ಧತೆ ಬಂದಿರುವುದಿಲ್ಲ ಎಂಬ ಪ್ರಶ್ನೆಗೆ ಇದಕ್ಕೆ ಲೆವಿಟ್ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದು ನಿಜ ಎಂದು ಉತ್ತರಿಸಿದ್ದಾರೆ. ನಾನು ನನ್ನ ರಿಯಲ್ ಎಸ್ಟೇಟ್ ಡೆವಲಪರ್ ಪತಿ ನಿಕೋಲಸ್ ರಿಕಿಯೊ ಅವರನ್ನು 2022 ರಲ್ಲಿ ಪರಸ್ಪರ ಸ್ನೇಹಿತನ ಮೂಲಕ ಭೇಟಿಯಾದೆವು. ಆ ಸಮಯದಲ್ಲಿ ಲೆವಿಟ್ ನ್ಯೂ ಹ್ಯಾಂಪ್‍ಶೈರ್‍ನಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ಅಲ್ಲಿ ಅವರು ಸೋಲನ್ನು ಎದುರಿಸಬೇಕಾಯಿತು. ನನ್ನ ಪೆÇೀಷಕರು ಈ ಸಂಬಂಧವನ್ನು ಒಪ್ಪಿಕೊಳ್ಳಲು ತುಂಬಾ ಸಮಯ ತೆಗೆದುಕೊಂಡರು ಎಂದಿದ್ದಾರೆ ಇದಕ್ಕೆ ನನ್ನ ಪತಿ ರಿಕಿಯೊ ನನ್ನ ತಾಯಿಗಿಂತ ದೊಡ್ಡವರು ಎಂಬ ಸಂಗತಿ ಇದಕ್ಕೆ ಕಾರಣವಾಗಿತ್ತು.


ಆರಂಭದಲ್ಲಿ ಈ ಸಂಬಂಧದೊಂದಿಗೆ ಮುಂದುವರಿಯುವುದು ಕಷ್ವಾಗಿತ್ತು.ಈಗ ನಮ್ಮ ಕುಟುಂಬ ಸಂಬಂಧವೂ ತುಂಬಾ ಚೆನ್ನಾಗಿದೆ ನಾವೆಲ್ಲರೂ ಸ್ನೇಹಿತರಂತೆ ಇದ್ದೇವೆ. ನನ್ನ ಪತಿ ನನ್ನ ಹೆತ್ತವರನ್ನು ತುಂಬಾ ಗೌರವಿಸುತ್ತಾರೆ. ನಾವೆಲ್ಲರೂ ಭೇಟಿಯಾದಾಗ, ಬಹಳಷ್ಟು ಹಾಸ್ಯ ಪ್ರಸಂಗ ಜರುಗುತ್ತದೆ . ನನ್ನ ಪತಿ ಅದ್ಭುತ ವ್ಯಕ್ತಿ ಎಂದು ಅವರು ಹೇಳಿದ್ದಾರೆ. ಅವರ ವಯಸ್ಸಿನ ಮೇಲೆ ಮಾತ್ರ ಗಮನ ನೀಡುವುದು ಸರಿಯಲ್ಲ. ಅವರು ಸ್ವಯಂ ನಿರ್ಮಿತ ವ್ಯಕ್ತಿ ಮತ್ತು ತುಂಬಾ ಅದ್ಭುತ. ಇಂದು ನಮಗೆ ಸುಂದರವಾದ ಮಗು ಇದೆ ಮತ್ತು ನಾವು ಉತ್ತಮ ಜೀವನವನ್ನು ನಡೆಸುತ್ತಿದ್ದೇವೆ ಎಂದಿದ್ದಾರೆ.