
ಶಿಯೋಪುರ್,ಆ.29:- ಚಿರತೆಗಳು ನೀರಿನಿಂದ ದೂರವಿರುತ್ತವೆ ಎಂಬ ಸಾಮಾನ್ಯ ನಂಬಿಕೆ ಇದೆ. ಆದರೆ, ಆಫ್ರಿಕಾದಿಂದ ಭಾರತಕ್ಕೆ ತರಲಾದ ಚಿರತೆಗಳು ಈ ನಂಬಿಕೆಯನ್ನು ತೊಡೆದು ಹಾಕುತ್ತಿವೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನದಿಯಲ್ಲಿ ಮರಿಗಳು ಈಜುತ್ತಿರುವುದು ಕಂಡುಬಂದಿದೆ. ಚಿರತೆಗಳ ಈ ನಡವಳಿಕೆಯನ್ನು ನೋಡಿ ತಜ್ಞರು ಆಶ್ಚರ್ಯಚಕಿತರಾಗಿದ್ದಾರೆ.
ಚಿರತೆಗಳು ಸಾಮಾನ್ಯವಾಗಿ ನೀರಿನಿಂದ ದೂರವಿರುತ್ತವೆ ಎಂದು ಪ್ರಾಜೆಕ್ಟ್ ಚೀತಾ ತಜ್ಞರು ಮೂರು ವರ್ಷಗಳ ಹಿಂದೆ ಹೇಳಿದ್ದರು ಆದರೆ ಇತ್ತೀಚಿನ ಮಳೆಯ ಸಮಯದಲ್ಲಿ, ಕೆಲವು ಚಿರತೆ ಮರಿಗಳು ಮತ್ತು ಅವುಗಳ ನಮೀಬಿಯಾ ಮೂಲದ ತಾಯಿ ಕುನೋ ನದಿಯನ್ನು ದಾಟಿ ಈಜುತ್ತಿರುವುದು ಕಂಡುಬಂದಿದ್ದು, ಇದು ಬಹುಕಾಲದ ನಂಬಿಕೆಗಳನ್ನು ಮುರಿದಿದೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳು ಈಜುತ್ತಿರುವ ಘಟನೆ ತಜ್ಞರನ್ನು ಅಚ್ಚರಿಗೊಳಿಸಿದೆ.
ಆಫ್ರಿಕಾದಲ್ಲಿ ಚಿರತೆಗಳು ನೀರಿನಿಂದ ದೂರವಿರುತ್ತವೆ ಎನ್ನಲಾಗಿದೆ ಆದರೆ ಭಾರತದಲ್ಲಿ ಜನಿಸಿದ ಮರಿಗಳು ಈ ಕಲ್ಪನೆಯನ್ನು ತಪ್ಪೆಂದು ಸಾಬೀತುಪಡಿಸಿವೆ. ಅವು ಕುನೋ ಮತ್ತು ಚಂಬಲ್ ನದಿಗಳಲ್ಲಿ ಈಜುವುದನ್ನು ಸಹ ನೋಡಲಾಗಿದೆ.
ಕುನೋ ಮತ್ತು ಚಂಬಲ್ ನದಿಗಳನ್ನು ದಾಟುತ್ತಿರುವುದನ್ನು ಕುನೋದಲ್ಲಿನ ಅಧಿಕಾರಿಗಳು ದೃಢಪಡಿಸಿದ್ದಾರೆ. ಕುನೋ ಯೋಜನೆಯ ಕ್ಷೇತ್ರ ನಿರ್ದೇಶಕ ಉತ್ತಮ್ ಶರ್ಮಾ, ಮರಿಗಳು ಸುಲಭವಾಗಿ ಈಜುವುದನ್ನು ನಾವು ನೋಡಿದ್ದೇವೆ. ‘ಜ್ವಾಲಾ’ ತನ್ನ ಮರಿಗಳೊಂದಿಗೆ ನಡೆಯುವಾಗ ಕುನೋ ನದಿಯನ್ನು ದಾಟಿದೆ ಎಂದು ನಂಬಲಾಗಿದೆ ಎಂದು ಹೇಳಿದ್ದಾರೆ.
ಈ ತಿಂಗಳು ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದ ಬಳಿಯಿಂದ ರಕ್ಷಿಸಲ್ಪಟ್ಟ ಜ್ವಾಲಾ, ಕುನೋ ರಾಷ್ಟ್ರೀಯ ಉದ್ಯಾನವನದಿಂದ ದಾರಿ ತಪ್ಪಿ ಚಂಬಲ್ ನದಿಯನ್ನು ಸಹ ಈಜಿದ್ದಳು ಎನ್ನಲಾಗಿದೆ.
ಚಿರತೆಗಳನ್ನು ಬಲವಾದ ಈಜುಗಾರರೆಂದು ಪರಿಗಣಿಸಲಾಗುವುದಿಲ್ಲ. ನಡವಳಿಕೆಯಲ್ಲಿನ ಈ ಬದಲಾವಣೆಯು ತಜ್ಞರನ್ನು ರೋಮಾಂಚನಗೊಳಿಸಿದೆ.
ಕುನೊದಲ್ಲಿ, ನದಿಯ ಅಗಲ ಕೇವಲ 200 ಮೀಟರ್ ಆಗಿದೆ ಗಾಂಧಿ ಸಾಗರ್ ಅಭಯಾರಣ್ಯದಲ್ಲಿ ಚಿರತೆಗಳು ಚಂಬಲ್ ಅನ್ನು ದಾಟಲು ಪ್ರಯತ್ನಿಸುವ ಸಾಧ್ಯತೆಯಿದೆ, ಆದ್ದರಿಂದ ನಾವು ಈಗ ಜಾಗರೂಕರಾಗಿರಬೇಕು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.