Home ಜಿಲ್ಲೆ ಕೌಲ್ ಬಜಾರ್ ಮಂಡಲದ ಬಿಜೆಪಿಯ ವಿವಿಧ ಮೋರ್ಚಾ ಪದಾಧಿಕಾರಿಗಳ ನೇಮಕ

ಕೌಲ್ ಬಜಾರ್ ಮಂಡಲದ ಬಿಜೆಪಿಯ ವಿವಿಧ ಮೋರ್ಚಾ ಪದಾಧಿಕಾರಿಗಳ ನೇಮಕ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಮಾ.16: ಭಾರತೀಯ ಜನತಾ ಪಾರ್ಟಿಯ ನಗರದ ಕೌಲ್ ಬಜಾರ್ ಮಂಡಲದ 7 ಮೋರ್ಚಾ ಗೆ ಅಧ್ಯಕ್ಷರ ಹಾಗು ಮಂಡಲಕ್ಕೆ ಹೊಸ ಪದಾಧಿಕಾರಿಗಳನ್ನು ಮಂಡಲ ಅಧ್ಯಕ್ಷ ಎ. ನಾಗರಾಜ ರೆಡ್ಡಿ ನೇಮಕ ಮಾಡಿದ್ದಾರೆ.

ಪಕ್ಷದ ಸಂಘಟನಾ ಚಟುವಟಿಕೆಗಳನ್ನು ವಿಸ್ತರಿಸುವ ಹಾಗೂ ಕಾರ್ಯಕರ್ತರನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಈ ನೇಮಕಾತಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ನೇಮಕಗೊಂಡ ಪದಾಧಿಕಾರಿಗಳು ಪಕ್ಷದ ತತ್ವಸಿದ್ಧಾಂತಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸವನ್ನು ಮಾಡಬೇಕೆಂದು ಸೂಚಿಸಿದ್ದಾರೆ.

ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಲತಾ, ಎಸ್.ಸಿ ಮೋರ್ಚಾ ಅಧ್ಯಕ್ಷರಾಗಿ ಸುಂಕಣ್ಣ.ಎಸ್.ಟಿ ಮೋರ್ಚಾ ಅಧ್ಯಕ್ಷರಾಗಿ ರಾಜಶೇಖರ್, ಒಬಿಸಿ ಮೋರ್ಚಾ ಅಧ್ಯಕ್ಷರಾಗಿ ಆರ್. ಶೇಖಣ್ಣ, ರೈತ ಮೋರ್ಚಾ ಅಧ್ಯಕ್ಷರಾಗಿ ವೆಂಕಟೇಶ್, ಯುವ ಮೋರ್ಚಾ ಅಧ್ಯಕ್ಷರಾಗಿ ಬಟ್ಟಿ ಗಾದಿಲಿಂಗ ಹಾಗೂ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಮೊಹಮ್ಮದ್ ಗೌಸ್ ಅವರನ್ನು ನೇಮಕ ಮಾಡಲಾಗಿದೆ.

ಇದೇ ವೇಳೆಮಂಡಲಕ್ಕೆ ಕೊಂಡಿ ಮಲ್ಲಿಕಾರ್ಜುನ,ವೆಂಕಟೇಶ್ ಗುರುರಾಜ್, ರಾಮಚಂದ್ರ, ಹನುಮಂತ ರಾವ್ ಮತ್ತು ಮೊಹಮ್ಮದ್ ಖದಿರ್ ಅವರನ್ನು ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಜೊತೆಗೆ ಎಂ.ಪಿ.ರಾಜೇಶ್ ಮತ್ತು ಜಿ.ಅವಿನಾಶ್ ನಾಯ್ಡು ಅವರನ್ನು ಪ್ರಧಾನ ಕಾರ್ಯದರ್ಶಿಗಳಾಗಿ, ಈ ಮೂರ್ತಿ. ವಿ.ಶ್ರೀಧರ್,ಯೇಸು, ನೀಲಕಂಠ ಆಚಾರ್ಯ, ಮಲೇಶ್ ಮತ್ತು ಅನ್ನಕ್ಲರ ಅವರನ್ನು ಕಾರ್ಯದರ್ಶಿಗಳಾಗಿ, ಜಿ. ಅಭಿಲಾಶ್ ನಾಯ್ಡು ಅವರನ್ನು ಖಜಾಂಚಿಯಾಗಿ ಹಾಗೂ ವಿ. ಜೆ . ಜೋಸೆಫ್ ಅವರನ್ನು ಕಾರ್ಯಾಲಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.