
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.15: ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ (ರಿ), ಬಳ್ಳಾರಿ ಇವರಿಂದ ಹೈಸ್ಕೂಲ್ ಮೈದಾನರಾಮುಲಮ್ಮಗುಡಿ ಹತ್ತಿರ, ಕರ್ಚೇಡುಗ್ರಾಮದಲ್ಲಿ, ರಂಗಗೀತೆಗಳ ಕಾರ್ಯಕ್ರಮ ಹಾಗೂ ರಾಮಾಯಣ ಬಯಲಾಟ ಪ್ರದರ್ಶನ ನಡೆಯಿತು.
ಈ ಕಾರ್ಯಕ್ರಮದಉದ್ಘಾಟನೆಯನ್ನುಕರ್ಚೇಡುಗ್ರಾಮದ ಹಾಗೂ ಸುತ್ತಮುತ್ತ ಹಳ್ಳಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾಗ್ರಾಮ ಪಂಚಾಯಿತಿ ಸದಸ್ಯರುಗಳು ಶ್ರೀಶ್ರೀ ಶಿವಶರಣ ಅಶ್ವತ್ಥಾಮತಾತನವರ ಆಶಿರ್ವಾದದೊಂದಿಗೆ ನಡೆಯಿತು.ಈ ಕಾರ್ಯಕ್ರಮದ ಪ್ರಾರ್ಥನೆಗೀತೆಯನ್ನು ಹಾರ್ಮೋನಿಯಂ ವಾದಕರಾದ ವೈ.ರಂಗಾರೆಡ್ಡಿ, ಕರ್ನಾಟಕ ಬಯಲಾಟಅಕಾಡೆಮಿ ಪುರಸ್ಕೃತರುಇವರಿಂದ ಪ್ರಾರಂಭವಾಯಿತು. ನಂತರದಲ್ಲಿ ಶ್ರೀಮತಿ ಸುಜಾತಮ್ಮ, ರಾಜ್ಯ ಪ್ರಶಸ್ತಿ ಪುರಸ್ಕೃತರು, ಶ್ರೀಮತಿ ಎರ್ರೆಮ್ಮರಂಗಭೂಮಿಕಲಾವಿದೆ ಹಾಗೂ ಬಿ.ಲಕ್ಷ್ಮೀನಾರಾಯಣಇವರಿಂದ ನಡೆಯಿತು. ನಾಗರಾಜಗೌಡಕರ್ಚೇಡುಇವರತಂಡದಿಂದ ಶ್ರೀ ರಾಮಯಣ ಬಯಲಾಟ ಪ್ರದರ್ಶನ ಬಹಳ ಅದ್ದೂರಿಯಾಗಿ ನಡೆಯಿತು.
ವೈ.ರಂಗಾರೆಡ್ಡಿ, ಕರ್ನಾಟಕ ಬಯಲಾಟಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಸುಜಾತಮ್ಮ ಬಯಲಾಟಟ್ರಸ್ಟ್ವತಿಯಿಂದಗ್ರಾಮದಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾ.ಪಂ. ಸದಸ್ಯರಿಗೆ ಹಾಗೂ ಕಲಾವಿದರಿಗೆ ಸನ್ಮಾನಿಸಲಾಯಿತುಇವರಿಂದ ಸನ್ಮಾನಿಸಲಾಯಿತು.
ಬಯಲಾಟ ಪಾತ್ರಧಾರಿಗಳು, ರಾವಣಾಸುರ, ರಾಜಕರ್ಚೇಡು, ರಾಮ ನಾಗೇಶ್ ವಣೇನೂರು, ಲಕ್ಷ್ಮಣ ಬಸವರಾಜ, ಬೆಣಕಲ್ಲು, ಅಂಜಿನೇಯ್ಯ ಮಲ್ಲಿಕಾರ್ಜುನ ಗೂಳ್ಯಂ, ಮಾರೀಚ ಸಂಗಾಲ್ ಸೀನಪ್ಪ, ಸೀತಾದೇವಿ ಕೋಟೆಅಂಜಿನಮ್ಮಕೂಡ್ಲಿಗಿ, ಮಾಯಾಸ್ತ್ರಿ ನಾಗಮ್ಮ ವೀರಾಪುರ, ಹಾರ್ಮೋನಿಯಂ ವಾದಕರು ವೈ.ರಂಗಾರೆಡ್ಡಿ, ಕರ್ನಾಟಕ ಬಯಲಾಟಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಕೆ.ವೀರಾಪುರ, ತಬಲ ವಾದಕರು ವೀರೇಶ್ ಬಳ್ಳಾರಿ, ಬಯಲಾಟ ಸಾಮಾನು ಶ್ರೀ ಬಸವೇಶ್ವರರಂಗಸಜ್ಜಿಕೆ, ಬೂದೂಗಪ್ಪ, ಮೇಕಪ್ಆರ್ಟಿಸ್ಟ್ಗಂಗಾಧರ, ಬೂದೂಗುಪ್ಪ, ಹಿಮ್ಮೇಳ & ಮುಮ್ಮೇಳ ವಾದಕರು : ಬಾದಮಿರಾಜಪ್ಪಕರ್ಚೇಡು, ಪಿ.ಶಾಗಪ್ಪಕರ್ಚೇಡು, ಗಾದಿಲಿಂಗಪ್ಪ ಹಂದ್ಯಾಳ್. ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಎಂ.ಮಲ್ಲಿಕಾರ್ಜುನಸ್ವಾಮಿ, ಕೆ.ಕೆ.ಹಾಳ್ ಇವರು ಸ್ವಾಗತಿಸಿದರು. ಈ ಕಾರ್ಯಕ್ರಮವನ್ನು ಸುಜಾತಮ್ಮ ಬಯಲಾಟಟ್ರಸ್ಟ್, ಬಳ್ಳಾರಿ ಕಾರ್ಯದರ್ಶಿ ಶ್ರೀ ಬಿ.ಲಕ್ಷ್ಮೀನಾರಾಯಣಇವರು ವಂದನಾರ್ಪಣೆ ಮಾಡಿದರು.



























