Home ಜಿಲ್ಲೆ ಎಸ್ಸಿ/ಎಸ್ಟಿ ಹಿಂದುಳಿದ ವರ್ಗಗಳ ಮೀಸಲಾತಿ ಹೆಚ್ಚಳಕ್ಕೆ ಆಗ್ರಹ

ಎಸ್ಸಿ/ಎಸ್ಟಿ ಹಿಂದುಳಿದ ವರ್ಗಗಳ ಮೀಸಲಾತಿ ಹೆಚ್ಚಳಕ್ಕೆ ಆಗ್ರಹ

ಸಂಜೆವಾಣಿ ವಾರ್ತೆ

ಬಳ್ಳಾರಿ, ಏ.22 :ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮಿಸಲಾತಿ ಶೇ 17% ಪರಿಶಿಷ್ಟ ಪಂಗಡ ಶೇ 7% ಹಿಂದುಳಿದ ವರ್ಗ 32% ಒಟ್ಟು 56% ರಷ್ಟು ಮೀಸಲಾತಿಯನ್ನು ಭಾರತ ಸರ್ಕಾರದ ಸಂವಿಧಾನ 9ನೇ ಷೆಡ್ಯೂಲ್ಗೆ ಸೇರಿಸುವ ಬಗ್ಗೆ ಮತ್ತು ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪತ್ರ ನೀಡಿರುವ ಅಧಿಕಾರಿಗಳ ವಿರುದ್ದು ಮತ್ತು ಸುಳ್ಳು ಮಾಹಿತಿ ನೀಡಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಆಗ್ರಹಿಸಿದೆ.

ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಹಿಂದುಳಿದ ಪ್ರವರ್ಗ 1 ರಲ್ಲಿ ಬರುವ ಕೋಲಿ/ಕಬ್ಬಲಿಗ ಜನಾಂಗದ ತಳವಾರರು ಪರಿಶಿಷ್ಟ ಪಂಗಡದ ನಾಯಕ, ನಾಯ್ಕಡ ತಳವಾರ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳು/ಸಿಂದುತ್ವಗಳನ್ನು ತೆಗೆದುಕೊಳ್ಳುವುದನ್ನು ತಡೆಗಟ್ಟಬೇಕು ಮತ್ತು ಸುಳ್ಳು ಜಾತಿ ಪತ್ರಗಳ ನೀಡುವ ಅಧಿಕಾರಿಗಳ ಮೇಲೆ ಎಫ್ ಐ ಆರ್ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು,  ಹಿಂದುಳಿದ ಪ್ರವರ್ಗ – 1 ರಲ್ಲಿ ಬರುವ ಕೋಲಿ/ಕಬ್ಬಲಿಗ ಜನಾಂಗದ ವೃತ್ತಿ ಸೂಚಕ ತಳವಾರರನ್ನು ಹಿಂದುಳಿದ ಪ್ರವರ್ಗ -1 ರ ಪಟ್ಟಿಯ ಕ್ರಮ ಸಂಖ್ಯೆ : 6 ಕ್ಕೆ ಬೇಸ್ತ/ಕೋಲಿ/ಕಬ್ಬಲಿಗ ಗುಂಪಿಗೆ 38ನೇ ಪದವಾಗಿ ಸೇರಿಸಲು ಒತ್ತಾಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ರಕ್ಷಣೆ ಮಾಡಲು ಶೆಡ್ಯೂಲ್ 9 ಗೆ ಸೇರಿಸಬೇಕು. ಕರ್ನಾಟಕ ಉಚ್ಚನ್ಯಾಯಾಲಯದ ರಿಟ ಅರ್ಜಿ ಸಂಖ್ಯೆ : 13777/2023 ಹೂಡಿದ ದಾವೆಯ ಮಧ್ಯಂತರ ಆದೇಶದ ಪ್ರಕಾರ ಪರಿಶಿಷ್ಟ ಪಂಗಡದ ನಾಯಕ, ನಾಯ್ಕಡ, ತಳವಾರ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡವರು ಮತ್ತು ನೀಡಿದ ವರ ಮೇಲೆ ಶೀಘ್ರವೇ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸರಕಾರಕ್ಕೆ ಒತ್ತಾಯ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣ ಮತ್ತು ಉನ್ನತ ಶಿಕ್ಷಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಪ್ರೋತ್ಸಾಹಧನ, ಸಹಾಯಧನ, ತಕ್ಷಣ ಬಿಡುಗಡೆ ಮಾಡುವುದು ಸೇರಿದಂತೆ ಪ್ರಮುಖ 11 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡರುಗಳಾದ ಬಾದನಹಟ್ಟಿ ಶಿವಶಂಕರ್, ಸಂಗನಕಲ್ಲು ವಿಜಯಕುಮಾರ್ ಟಿ. ಲೋಕೇಶ್, ಜೋಳದ ರಾಶಿ ತಿಮ್ಮಪ್ಪ, ಬಸರು ಕೋಡು ಗೋವಿಂದ, ಕುಬೇರ್, ಇನ್ನೂ ಅನೇಕ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.