ಎಪಿಎಸ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಬೆಂಗಳೂರು,ನ.೨೦– ನಗರದ ಎಪಿಎಸ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಆಡಳಿತ ವರ್ಗ ಕನ್ನಡದ ಬಾವುಟದ ಪ್ರತೀಕವಾದ ಹಳದಿ ಮತ್ತು ಕೆಂಪುಬಣ್ಣದ ವಸ್ತ್ರಗಳೊಂದಿಗೆ ಸಂಭ್ರಮಿಸಿದರು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಲಾಶ್ರೀ ಡಾ. ಜಯಶ್ರೀ ಅರವಿಂದ್, ಶ್ರೀಸಂತವಾಣಿ ಸುಧಾಕರ್ ಹಾಗೂ ತಂಡ ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು. ಡಾ. ಜಯಶ್ರೀ ಅರವಿಂದ್ ಅವರು ಎಪಿಎಸ್ ಸಂಸ್ಥೆಗಳೊಂದಿಗೆ ತಮ್ಮ ಆರು ದಶಕಗಳ ದೀರ್ಘಕಾಲದ ನಂಟನ್ನು ಸ್ಮರಿಸಿ, ಶಿಕ್ಷಣ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಸಂಸ್ಥೆಯ ನಿರಂತರ ಕೊಡುಗೆಯನ್ನು ಶ್ಲಾಘಿಸಿದರು.


ಎಪಿಎಸ್ ಸಂಸ್ಥೆಗಳ ಅಧ್ಯಕ್ಷರಾದ ಸಿಎ. ಡಾ. ವಿಷ್ಣು ಭರತ್ ಅಲಂಪಲ್ಲಿ ಮಾತನಾಡಿ., ಕನ್ನಡ ನಾಡಿನಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಜನ್ಮವೆತ್ತಿರುವುದು ನಿಜವಾದ ಭಾಗ್ಯ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ. ಎ. ಪ್ರಕಾಶ್, ಪ್ರಾಂಶುಪಾಲರಾದ ಪರಮೇಶ ಎಪಿಎಸ್ ಕಾಲೇಜ್ ಆಫ್ ಕಾಮರ್ಸ್, ಭಾಗ್ಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.