ಇಲಾಖೆಯ ಮೈಸೂರು ವಿಭಾಗಿಯ ನಿರ್ದೇಶಕರನ್ನು ಭೇಟಿ ಮಾಡಿದ ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ

ಸುಳ್ಯ ಸರಕಾರಿ ಆಸ್ಪತ್ರೆಯ ಡಿಗ್ರೂಪ್ ನೌಕರರ ಮುಷ್ಕರ ಹಿನ್ನೆಲೆ
ಸುಳ್ಯ:ಸುಳ್ಯ ಸರಕಾರಿ ಆಸ್ಪತ್ರೆಯ ಡಿಗ್ರೂಪ್ ನೌಕರರಿಗೆ ಸಂಬಳ ಬಾರದ ಕಾರಣ ಡಿಗ್ರೂಪ್ ನೌಕರರು ಮುಷ್ಕರ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ. ಎಂ. ಮುಸ್ತಫ ಆರೋಗ್ಯ ಇಲಾಖೆಯ ಮೈಸೂರು ವಿಭಾಗಿಯ ಸಹ ನಿರ್ದೇಶಕರನ್ನು ಭೇಟಿ ಸಮಸ್ಯೆಯನ್ನು ವಿವರಿಸಿದರು.
ಸುಳ್ಯ ಸರ್ಕಾರಿ ತಾಲೂಕು ಆಸ್ಪತ್ರೆಯ ಡಿಗ್ರೂಪ್ ನೌಕರರಿಗೆ ಕಳೆದ ೩ ತಿಂಗಳುಗಳಿಂದ ವೇತನ ಪಾವತಿಯಾಗದ ಕಾರಣ ಕೆಲಸಕ್ಕೆ ಹಾಜರಾಗದೆ ನೌಕರರು ಮುಷ್ಕರ ನಡೆಸುತ್ತಿದ್ದು ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ಸಮಸ್ಯೆಯನ್ನು ಬಗೆಹರಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೈಸೂರು ವಿಭಾಗದ ಸಹ ನಿರ್ದೇಶಕರಾದ ಡಾ. ಪ್ರಸಾದ್ ಅವರಲ್ಲಿ ಮುಸ್ತಫ ವಿನಂತಿಸಿದರು.
ಈ ಸಂದರ್ಭದಲ್ಲಿ ವಿವರಣೆ ನೀಡಿದ ಸಹ ನಿರ್ದೇಶಕರು ವೇತನವನ್ನು ಏಜನ್ಸಿಗೆ ಪಾವತಿಸುವ ಕಡತ ತರಿಸಿ ಸಹಿ ಹಾಕಿ ತಕ್ಷಣ ಪಾವತಿಗೆ ಸೂಚಿಸಿದರು. ಇನ್ನುಳಿದ ೩ ತಿಂಗಳ ವೇತನ ವನ್ನು ನಿಯಮದಂತೆ ಏಜೆನ್ಸಿ ಯವರು ಪಾವತಿಸಿ ಬಿಲ್ಲು ಕಳಿಸಿದರೆ ತಕ್ಷಣ ಏಜನ್ಸಿಗೆ ಪಾವತಿಸುವುದಾಗಿ ಸಹ ನಿರ್ದೇಶಕರು ತಿಳಿಸಿದ್ದಾರೆ ಎಂದು ಮುಸ್ತಫ ತಿಳಿಸಿದ್ದಾರೆ.