
ಬೇಕಾಗುವ ಸಾಮಗ್ರಿಗಳು:
4 ಟೀ ಸ್ಪೂನ್ ಅಡುಗೆ ಎಣ್ಣೆ ಅರ್ಧ ಟೀ ಸ್ಪೂನ್ ಸಾಸಿವೆ ಅರ್ಧ ಟೀಸ್ಪೂನ್ ಜೀರಿಗೆ
1 ಟೀ ಸ್ಪೂನ್ ಕಡ್ಲೆಬೇಳೆ
1 ಟೀ ಸ್ಪೂನ್ ಉದ್ದಿನಬೇಳೆ
ಕಾಲು ಟೀಸ್ಪೂನ್ ಅರಿಶಿನಪುಡಿ
ಒಂದು ಚಿಟಿಕೆ ಇಂಗು
1 ಸೆಮೀ ಉದ್ದದ ಶುಂಠಿ 3 ಎಸಳು ಬೆಳ್ಳುಳ್ಳಿ
4 5 ಕರಿಬೇವಿನ ಎಲೆ 1 ? 2 ಹಸಿರು ಮೆಣಸಿನಕಾಯಿ
1 ದೊಡ್ಡ ಈರುಳ್ಳಿ 1 ಸಣ್ಣ ಕ್ಯಾರಟ್ 1 ಟೊಮೆಟೊ
2 ಮಧ್ಯಮ ಗಾತ್ರದ ಆಲೂಗಡ್ಡೆ
2 ಟೀಸ್ಪೂನ್ ಕಡ್ಲೆ ಹಿಟ್ಟು
1 ಮಧ್ಯಾಹ್ನ ಕೊತ್ತಂಬರಿ ಅಥವಾ ಧನಿಯಾ ಪುಡಿ ಅರ್ಧ ಜೀರಿಗೆ ಪುಡಿ
2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು ನಿಮ್ಮ ರುಚಿಗೆ ತಕ್ಕಂತೆ ಉಪ್ಪು
ಮಾಡುವ ವಿಧಾನ:
ಆಲೂಗಡ್ಡೆಯನ್ನು ತೊಳೆದು, ಬೇಯಿಸಿ,
ಸಿಪ್ಪೆ ತೆಗೆದು ಪುಡಿಮಾಡಿಕೊಳ್ಳಿ. ಈರುಳ್ಳಿ ಮತ್ತು ಟೊಮೇಟೊ ಕತ್ತರಿಸಿ. ಕ್ಯಾರಟ್ ತುರಿಯಿರಿ. ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ. ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಕಡ್ಲೆಬೇಳೆ ಮತ್ತು ಉದ್ದಿನಬೇಳೆಯ ಒಗ್ಗರಣೆ ಮಾಡಿ. ಸಾಸಿವೆ ಸಿಡಿದ ಕೂಡಲೇ ಅರಿಶಿನ ಪುಡಿ, ಇಂಗು, ಕರಿಬೇವಿನ ಎಲೆ, ಸಣ್ಣಗೆ ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ ಮತ್ತು ಸೀಳಿದ ಹಸಿರು ಮೆಣಸಿನಕಾಯಿ ಹಾಕಿ ಮಗುಚಿ, ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ.ಈರುಳ್ಳಿ ಮೆತ್ತಗಾದ ಕೂಡಲೇ ತುರಿದ ಕ್ಯಾರಟ್ ಹಾಕಿ ಹುರಿಯಿರಿ. ನಂತರ ಟೊಮ್ಯಾಟೋ ಹಾಕಿ ಹುರಿಯಿರಿ.
ಪುಡಿಮಾಡಿದ ಆಲೂಗಡ್ಡೆ ಹಾಕಿ. ಒಂದು ಬಟ್ಟಲಿನಲ್ಲಿ ಕಡ್ಲೆಹಿಟ್ಟು, ಧನಿಯಾ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪನ್ನು ಒಂದು ಲೋಟ ನೀರಿನಲ್ಲಿ ಕಲಸಿ ಹಾಕಿ, ಚೆನ್ನಾಗಿ ಮಗುಚಿ, ಐದು ನಿಮಿಷ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಕೊತ್ತಂಬರಿ ಸೊಪ್ಪು ಉದುರಿಸಿ. ಸ್ಟವ್ ಆಫ್ ಮಾಡಿ































