
ಸೈದಾಪುರ:ಫೆ.೧೫:ಉತ್ತಮ ಅಭ್ಯಾಸ ಮಾಡಿ ತಂದೆ ತಾಯಿಗಳು, ಸಂಸ್ಥೆಗೆ ಉತ್ತಮ ಹೆಸರು ತರುವ ವಿದ್ಯಾರ್ಥಿಗಳು ನಿವಾಗಬೇಕು. ಇದಕ್ಕಾಗಿ ಸತತ ಪ್ರರಿಶ್ರಮ ಅತಿ ಮುಖ್ಯವಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಹಾಗೂ ಗುರುಮಠಲ್ ತಾಲೂಕಾ ಪಂಚ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಲಕ್ಷಿö್ಮÃಕಾಂತರಡ್ಡಿ ಪಲ್ಲಾ ಅಭಿಪ್ರಾಯಪಟ್ಟರು.
ಪಟ್ಟಣದ ಮಲ್ಹಾರ ಕಾರಡ್ಡಿ ಬಸವಂತ್ರಾಯ ಮತ್ತು ಸಿದ್ದಪ್ಪ ಸ್ಮಾರಕ ವಿದ್ಯಾ ವರ್ಧಕ ಪದವಿ ಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಬೀಳ್ಕೊಡುಗೆ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು. ಯಾವಾಗಲು ಸಂತೋಷದಿAದ ಇರಬೇಕು. ಗ್ರಂಥಲಾಯಗಳಿಗೆ ಭೇಟಿ ನೀಡಿ ಸತತ ಅಧ್ಯಾಯನ ಮಾಡಬೇಕು. ಜ್ಞಾನದಿಂದ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಿವೃತ್ತಾ ಮುಖ್ಯಗುರು ಬಿ.ಬಿ.ಹೆಬ್ಬಾಳೆ ಮಾತನಾಡಿ, ಉತ್ತಮರ ಗೆಳೆತನ ಮಾಡಬೇಕು. ತಂದೆ ತಾಯಿಗಳ ಸೇವೆ ಮಾಡಬೇಕು. ಸಕ್ಕರೆ, ಉಪ್ಪು, ಮೈದವನ್ನು ಕಡಿಮೆ ಬಳಕೆ ಮಾಡಬೇಕು. ಪೋಷಕಾಂಶ ಇರುವ ಆಹಾರ ಸೇವೆ ಮಾಡುವುದರಿಂದ ಉತ್ತಮ ಆರೋಗ್ಯವಂತರಾಗಿ ಸಾಧನೆ ಮಾಡಲು ಸಾಧ್ಯವಿದೆ ಎಂದು ಕಿವಿ ಮಾತುಗಳನ್ನು ಹೇಳಿದರು.
ಇದಕ್ಕೂ ಮುಂಚೆ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್ಯದರ್ಶಿ ಕೆ.ಬಿ.ಗೋವರ್ಧನ, ಆಡಳಿತ ಮಂಡಳಿಯ ಸದಸ್ಯರಾದ ಬೂದೆಪ್ಪಗೌಡ ಭೀಮನಳ್ಳಿ, ಸಂಗಾರಡ್ಡಿಗೌಡ ಮಲ್ಹಾರ, ಪ್ರಭುಲಿಂಗ ವಾರದ, ಸಿದ್ರಾಮಪ್ಪಗೌಡ ಗೊಂದಡಗಿ, ಸುರೇಶ ಆನಂಪಲ್ಲಿ, ಚನ್ನಾರೆಡ್ಡಿ ಹುಣಸೇಮರ, ನಿವೃತ್ತಾ ಮುಖ್ಯಗುರು ಬಿ.ಬಿ.ಹೆಬ್ಬಾಳೆ, ಚಂದ್ರಾಯ ಬಾಡಿಯಾಲ, ಪ್ರಕಾಶ ಕುಲ್ಕರ್ಣಿ, ಗೂಳಪ್ಪ.ಎಸ್.ಮಲ್ಹಾರ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಹಂಪಣ್ಣ ಸಜ್ಜನಶೆಟ್ಟಿ, ಕರಬಸಯ್ಯ ದಂಡಿಗಿಮಠ, ಪ್ರಕಾಶರೆಡ್ಡಿ ಸೇರಿದಂತೆ ಇತರರಿದ್ದರು. ಉಪನ್ಯಾಸಕ ಬಸವರಾಜ ಭರಮಶೆಟ್ಟಿ ಸ್ವಾಗತಿಸಿದರು. ಚಂದ್ರಶೇಖರ ಡೊಣ್ಣೆಗೌಡ ನಿರೂಪಿಸಿದರು. ದೇವಿಂದ್ರ ಪೀರಾ, ಶಾಂತಲ್.ಎನ್, ರಾಜಶೇಖರ ಪಾಟೀಲ, ಅನುರಾಧ, ಇಂದಿರಾ ತೂರೆ, ಸದಾಶಿವ ಸೇರಿದಂತೆ ಇತರರಿದ್ದರು.
ಗಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೇಂದು ಸಂಸ್ಥೆಯ ವತಿಯಿಂದ ಕಳೆದ ಎರಡು ವರ್ಷಗಳಿಂದ ಪದವಿ ಮಹಾವಿದ್ಯಾಲಯ ಪ್ರಾರಂಭ ಮಾಡಲಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಅನುಮತಿ ಕೊಡಿಸುವಲ್ಲಿ ಪ್ರಯತ್ನ ಮಾಡಿದ್ದಾರೆ. ಇದರ ಸರಿಯಾದ ಸದುಪಯೋಗ ಪಡೆದುಕೊಂಡು ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸುವ ಅವಕಾಶ ನಿಮ್ಮದಾಗಲಿ.
ಲಕ್ಷಿö್ಮÃಕಾಂತರಡ್ಡಿ ಪಲ್ಲಾ ಉಪಾಧ್ಯಕ್ಷರು ವಿದ್ಯಾ ವರ್ಧಕ ಸಂಘ ಸೈದಾಪುರ































