
ಬೆಂಗಳೂರು, ಫೆ. ೮- ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಪೂರ್ಣಾವಧಿ ಇರುತ್ತಾರೆ ಎಂಬ ಯತೀಂದ್ರ ಸಿದ್ಧರಾಮಯ್ಯ ಅವರ ಹೇಳಿಕೆ ವೈಯುಕ್ತಿಕ ಹೇಳಿಕೆಯಾಗಿದೆ. ಪಕ್ಷದ ವರಿಷ್ಠರು ಎಲ್ಲವನ್ನು ಹೇಳಬೇಕು.
ನಾವು ಹೈಕಮಾಂಡ್ ಮೇಲೆ ಅವಲಂಬಿತರಾಗಿದ್ದೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಒಪ್ಪಂದ ಆಗಿದೆ ಎಂದು ಯಾರು ಹೇಳಿದ್ದಾರೆ, ಹೈಕಮಾಂಡ್ ಹೇಳಿದಿಯೇ, ಒಳಗೆ ಏನು ನಡೆದಿದೆ ಎಂಬುದು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಹೈಕಮಾಂಡ್ ಗಷ್ಟೇ ಗೊತ್ತಿದೆ ಎಂದರು.
ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ಸುಮ್ಮನೆ ಇದ್ದರೆ ನಾವು ಏನು ಅರ್ಥ ಮಾಡಿಕೊಳ್ಳುವುದು. ಹೈಕಮಾಂಡ್ ಏನೂ ಹೇಳದೆ, ಏನೂ ತೀರ್ಮಾನ ಮಾಡದೆ ಇರುವಾಗ ನಮಗೆ ಪ್ರಶ್ನೆಗಳನ್ನು ಕೇಳಿದರೆ ಪ್ರಯೋಜನ ಇಲ್ಲ ಎಂದರು.
ಪಕ್ಷದ ಹೈಕಮಾಂಡ್‌ಗೆ ಯಾವಾಗ ಏನು ಮಾಡಬೇಕು, ಯಾವ ರೀತಿ ಎಲ್ಲವನ್ನು ನಿರ್ವಹಿಸಬೇಕು ಎಲ್ಲವೂ ಗೊತ್ತಿದೆ. ಅಂತಿಮವಾಗಿ ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈ ಬಗ್ಗೆ ಹಲವರು ನೀಡುವ ಹೇಳಿಕೆಗಳಿಗಷ್ಟೇ ಸೀಮಿತ ಎಂದರು.
ರಾಜ್ಯದಲ್ಲಿ ಪರಿಸ್ಥಿತಿ ಏನಿದೆ, ಏನು ತೀರ್ಮಾನ ಮಾಡಬೇಕು. ಯಾವಾಗ ತೀರ್ಮಾನ ಮಾಡಬೇಕು ಎಂಬುದು ಹೈಕಮಾಂಡ್‌ಗೆ ಗೊತ್ತಿದೆ. ಹೈಕಮಾಂಡ್‌ನಿಂದ ಕರೆ ಬಂದಾಗ ಮಾತ್ರ ಎಲ್ಲವೂ ಇತ್ಯರ್ಥವಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಹೈಕಮಾಂಡ್ ತೀರ್ಮಾನ ಮಾಡದೆ, ಹೈಕಮಾಂಡ್ ಏನನ್ನೂ ಹೇಳದೆ ನಾವೇ ನಾವೇ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಅವರು ಹೇಳಿದರು.
ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರದಲ್ಲಿ ಪದೇ ಪದೇ ಗೊಂದಲವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸೇರಿ ಮಾಡುವ ನಿರ್ಧಾರ. ಈಗ ಕೇಂದ್ರ ಸರ್ಕಾರ ದರ ಏರಿಕೆಗೆ ತಡೆ ಕೊಟ್ಟಿದೆ. ಮುಂದೆ ಏನು ಮಾಡಬೇಕು ಎಂಬುದನ್ನು ಎರಡೂ ಕಡೆಯವರು ಚರ್ಚಿಸಿ ತೀರ್ಮಾನ ಆಗುತ್ತದೆ ಎಂದರು.
ದರ ನಿಗದಿ ಸಮಿತಿಗೆ ಸ್ವಾಯತತ್ತತೆ ನೀಡಲಾಗಿದೆ. ಹೀಗಾಗಿ ರಾಜ್ಯ ನಿಯಂತ್ರಣ ಮಾಡುವುದು ಕಷ್ಟ ಬೇರೆ ಸಮಿತಿ ಮಾಡಬಹುದು. ಆದರೆ ಕೇಂದ್ರದಿಂದ ನಿರ್ದೇಶನಗಳು ಸಮಿತಿಗೆ ಬಂದೆ ಬರುತ್ತವೆ ಎಂದರು.
ದೇಶ ಹಾಗೂ ತಪ್ಪು ಸಂದೇಶಗಳಿಂದ ಸಾವುಗಳಾಗುತ್ತಿವೆ. ಭಯೋತ್ಪಾದನೆ ಚಟುವಟಿಕೆಗೆ ಪ್ರಚೋದನೆ ಆಗುತ್ತದೆ. ಇದೆಲ್ಲವನ್ನು ನಿಯಂತ್ರಿಸುವ ಅಗತ್ಯವಿದ್ದು, ದೇಶದ ಸಂದೇಶಗಳ ಇದರ ಮೇಲೆ ನಿಗಾ ಇಡಲು ೬೭ ಕೋಟಿ ರೂ. ಖರ್ಚು ಮಾಡಿ ಎಐ ಸಾಫ್ಟ್‌ವೇರ್ ಖರೀದಿ ಮಾಡಲಾಗಿದೆ ಇದು ಅಗತ್ಯ ಇತ್ತು ಎಂದು ಪರಮೇಶ್ವರ್ ಹೇಳಿದರು.
ದೇಶ ಹಾಗೂ ತಪ್ಪು ಸಂದೇಶಗಳ ನಿಯಂತ್ರಣ ಆಗುತ್ತದೆ ಎಂದು ಜನ ಮಾತನಾಡುತ್ತಿದ್ದಾರೆ. ಜತೆಗೆ ಸೈಬರ್ ಕ್ರಂ ಹೆಚ್ಚಾಗಿದೆ. ಇದೆಲವನ್ನು ನಿಯಂತ್ರಿಸಲು ಸಾಫ್ಟ್‌ವೇರ್ ಖರಿದೀ ಮಾಡಿ ನಿಯಂತ್ರಣ ಮಾಡಬೇಕು ಹಣ ಖರ್ಚಾಗುತ್ತದೆ ಎಂದು ಇದಕ್ಕೂ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಹೇಳಿ, ಸಾಫ್ಟ್‌ವೇರ್ ಖರೀದಿಯನ್ನು ಸಮರ್ಥಿಸಿಕೊಂಡರು.
ಬೇರೆ ಬೇರೆ ರಾಜ್ಯಗಳಲ್ಲಿ ೨೦೦-೩೦೦ ಕೋಟಿ ರೂ. ಖರ್ಚು ಮಾಡಿದ್ದಾರೆ. ನಾವು ಸೈಬರ್ ಅಪರಾಧ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲೇಬೇಕು. ಸೈಬರ್ ಅಪರಾಧ ವಿಭಾಗದ ಮುಖ್ಯಸ್ಥ ಪ್ರಣಬ್ ಮಹಂತಿ ಅವರು ಇದಕ್ಕಾಗಿಯೇ ೧ ಸಾವಿರ ಕೋಟಿ ರೂ. ಪ್ರಸ್ತಾವ ಇಟ್ಟಿದ್ದಾರೆ ಎಂದು ಗೃಹ ಸಚಿವರು ಹೇಳಿದರು.


























