ವಿಶ್ವ ಸಂಗೀತ ದಿನಾಚರಣೆ: ವಿಶೇಷ ಸಂಗೀತ ಕಾರ್ಯಕ್ರಮ

ಕಲಬುರಗಿ,ಜೂ.24-ದೇವಿಂದ್ರಪ್ಪ ಜಿ.ಸಿ.ಸಂಗೀತ ಸಾಹಿತ್ಯ ಕಲಾ ಸಂಸ್ಥೆ ಸಹಯೋಗದಲ್ಲಿ ವಿಶ್ವ ಸಂಗೀತ ದಿನಾಚರಣೆ ಹಾಗೂ ಲಿಂ.ಪಂ.ಪಂಚಾಕ್ಷರಿ ಗವಾಯಿಗಳವರ 81ನೇ ಪುಣ್ಯಸ್ಮರಣೆ ಮತ್ತು ಗಾನಯೋಗಿ ಪಂ. ಪುಟ್ಟರಾಜ ಗವಾಯಿಗಳವರ 15ನೇ ಪುಣ್ಯಸ್ಮರಣೆ ನಿಮಿತ್ಯವಾಗಿ ನಗರದ ಅಮೃತ ಪುಸ್ತಕ ಮಹಲಿನಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ಜರುಗಿತು.
ಎನ್.ವಿ.ಡಿಗ್ರಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಸ್ವಾಮಿರಾವ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿದರು. ಎಂಎಸ್‍ಐ ಡಿಗ್ರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಶಂಕರ ರೆಡ್ಡಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಸಂಗೀತ ಶಿಕ್ಷಕ ಗುರುಲಿಂಗಯ್ಯಸ್ವಾಮಿ ಮಠಪತಿ, ಹಿರಿಯ ವೈದ್ಯ ಡಾ.ಎಸ್.ಎಸ್.ಗುಬ್ಬಿ, ಖ್ಯಾತ ಗಜಲ್ ಗಾಯಕ ಬಸಯ್ಯ ಬಿ.ಗುತ್ತೇದಾರ, ಗುಲಬರ್ಗಾ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕ ಡಾ.ನಾಗರಾಜ ಪುರಂಕರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ದೇವಿಂದ್ರಪ್ಪ ಜಿ.ಸಿ.ಸಂಗೀತ ಸಾಹಿತ್ಯ ಕಲಾ ಸಂಸ್ಥೆಯ ಅಧ್ಯಕ್ಷ ಸಿದ್ಧಾರ್ಥ ಡಿ.ಚಿಮ್ಮಾ ಇದ್ಲಾಯಿ ಉಪಸ್ಥಿತರಿದ್ದರು. ಶ್ರೀಧರ್ ಹೊಸಮನಿ ಪ್ರಾರ್ಥನಾಗೀತೆ ಹಾಡಿದರು.