
ಕಲಬುರಗಿ,ಮಾ.12-ವಿಶ್ವ ಮೂತ್ರಪಿಂಡ ದಿನದ ಅಂಗವಾಗಿ ಮೂತ್ರಪಿಂಡ ಆರೋಗ್ಯದ ಮಹತ್ವ ಮತ್ತು ಮೂತ್ರಪಿಂಡ ರೋಗಗಳ ತಡೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿರಾಯು ಆಸ್ಪತ್ರೆ ವತಿಯಿಂದ ಇಂದು ಮೂತ್ರಪಿಂಡ ಆರೋಗ್ಯ ಜಾಗೃತಿ ವಾಕ್‍ಥಾನ್ ಯಶಸ್ವಿಯಾಗಿ ಆಯೋಜಿಸಲಾಯಿತು.
ಬೆಳಿಗ್ಗೆ 8:00 ಗಂಟೆಗೆ ಚಿರಾಯು ಆಸ್ಪತ್ರೆಯಿಂದ ಪ್ರಾರಂಭವಾದ ಈ ವಾಕ್‍ಥಾನ್‍ನಲ್ಲಿ ವೈದ್ಯರು, ಆಸ್ಪತ್ರೆಯ ಸಿಬ್ಬಂದಿ, ನಸಿರ್ಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಉತ್ಸಾಹದಿಂದ ಭಾಗವಹಿಸಿದರು. ಮೂತ್ರಪಿಂಡಗಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಸಂದೇಶಗಳಿರುವ ಫಲಕಗಳನ್ನು ಹಿಡಿದು ಎಲ್ಲರೂ ನಡೆಯುವ ಮೂಲಕ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಜನರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ವೈದ್ಯರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಬದಲಾವಣೆ, ಮಧುಮೇಹ ಮತ್ತು ರಕ್ತದೊತ್ತಡದ ಕಾರಣದಿಂದ ಮೂತ್ರಪಿಂಡ ಸಂಬಂಧಿತ ರೋಗಗಳು ಹೆಚ್ಚಾಗುತ್ತಿರುವುದಾಗಿ ತಿಳಿಸಿದರು. ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ಸಮರ್ಪಕವಾಗಿ ನೀರು ಕುಡಿಯುವುದು ಹಾಗೂ ನಿಯಮಿತ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುವುದರಿಂದ ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಈ ವಾಕ್‍ಥಾನ್ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಚಿರಾಯು ಆಸ್ಪತ್ರೆಯ ಸಿಬ್ಬಂದಿ, ನಸಿರ್ಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು, ಟ್ರಾಫಿಕ್ ಪೆÇಲೀಸ್ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಚಿರಾಯು ಆಸ್ಪತ್ರೆಯ ನಿರ್ದೇಶಕರು ಹಾಗೂ ನೆಫ್ರಾಲಜಿಸ್ಟ್ ಡಾ. ಮಂಜುನಾಥ್ ದೋಷೆಟ್ಟಿ ಮತ್ತು ಅವರ ತಂಡ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

























