
ಕಲಬುರಗಿ, ಮಾ.14- ವಿಶ್ವ ಕಿಡ್ನಿ ದಿನ- 2026ರ ಧ್ಯೇಯವಾಕ್ಯ “ಎಲ್ಲರಿಗೂ ಕಿಡ್ನಿ ಅರೋಗ್ಯ: ಜನರ ಆರೈಕೆ ರಕ್ಷಣೆ” ಘೋಷಣೆಯಂತೆ ಕಿಡ್ನಿಯ ಆರೋಗ್ಯದ ಕುರಿತು ಜಾಗೃತಿ ಮತ್ತು ಅರಿವು ಮೂಡಿಸಲು ಉಸ್ತಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯವತಿಯಿಂದ ಕರಪತ್ರಗಳ ವಿತರಣೆ, ಜಾಗೃತಿ ಶಿಬಿರ ಮತ್ತು ಪ್ರಚಾರ ಬ್ಯಾನರ್‍ಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗುವುದು ಎಂದು ಆಸ್ಪತ್ರೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ.ತನ್ವೀರ ಹುಸೇನ್ ಉಸ್ತಾದ ಅವರು ಹೇಳಿದರು.
ಶಾಂತಿ ನಗರ ಉಸ್ತಾದ್ ಆಸ್ಪತ್ರೆಯಲ್ಲಿ ಗುರುವಾರ ಮಾ.12ರಂದು ಹಮ್ಮಿಕೊಂಡಿದ್ದ “ವಿಶ್ವಕಿಡ್ನಿ ದಿನಾಚರಣೆ-2026” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಮಟ್ಟವನ್ನು ನಿಯಂತ್ರಣದಲ್ಲಿಡಬೇಕು, ಮುತ್ರಪಿಂಡ ಕಾಯಿಲೆ ಪತ್ತೆಗೆ ರಕ್ತದಲ್ಲಿರುವ ಸಕ್ಕರೆ, ರಕ್ತದೊತ್ತಡ ಹಾಗೂ ಪೆÇ್ರೀಟಿನ್ ಅಂಶಕ್ಕಾಗಿ ಮೂತ್ರ ಪರೀಕ್ಷೆ ಕ್ರಿಯಾಟಿನ್ ಮಟ್ಟವನ್ನು ಪರೀಕ್ಷಿಸಿಕೊಳ್ಳುವುದರಿಂದ ಕಿಡ್ನಿಯ ಆರೋಗ್ಯವನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ.
ಕಿಡ್ನಿಯ ಆರೋಗ್ಯ ಕಾಪಾಡಿಕೊಳ್ಳಲು ಶುದ್ಧನೀರು ಕುಡಿಯಿರಿ, ಧೂಮಪಾನ ಮದ್ಯಪಾನ ಮತ್ತು ನೋವು ನಿವಾರಕ ಔಷಧ ಬಳಕೆಯನ್ನು ತಪ್ಪಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದ ಅವರು, ಬದಲಾದ ಜೀವನಶೈಲಿ ಒತ್ತಡದ ಜೀವನದಿಂದಾಗಿ ವಿಶ್ವದಲ್ಲಿ ಪ್ರತಿ 10 ಜನರಲ್ಲಿ ಒಬ್ಬರಿಗೆ ಮುತ್ರಪಿಂಡ ಸಮಸ್ಯೆ ಕಂಡು ಬರುತ್ತಿದೆ ಎಂಬ ವರಿಗಳು ಹೇಳಿತ್ತಿವೆ ಹೀಗಾಗಿ ಸಾರ್ವಜನಿಕರು ಕಿಡ್ನಿ ರೋಗವನ್ನು ಮುಂಚಿತವಾಗಿ ಗುರುತಿಸಿಕೊಳ್ಳಲು ನಿಯಮಿತವಾಗಿ ವೈದ್ಯರನ್ನು ಸಂಪರ್ಕಿಸಿ ಸ್ಥಿತಿಗತಿಯನ್ನು ತಿಳಿದುಕೊಂಡು ಮುಂಜಾಗ್ರತೆ ವಹಿಸುವುದು ಅತ್ಯುತ್ತಮ ವಿಧಾನವಾಗಿದೆ ಎಂದರು.
ಆಸ್ಪತ್ರೆಯ ಎಮರ್ಜೆನ್ಸಿ ಫಿಸಿಷಿಯನ್ ಮತ್ತು ಇಂಟೆನ್ಸಿವಿಸ್ಟ ಡಾ.ಅಬ್ದುಲ ರಜಾಕ ಮಡಕಿ ಅವರು, ಮಾತನಾಡಿ ಈ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕಣಗಳು ತುರ್ತು ಮತ್ತು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ರೋಗಿಳ ಜೀವ ರಕ್ಷಕವಾಗಿ ಕಾಪಾಡುತ್ತವೆ ಅವುಗಳ ನಿರ್ವಹಣೆಯನ್ನು ಇಲ್ಲಿನ ನುರಿತ ಸಿಬ್ಬಂದಿಗಳು, ವೈದ್ಯರು ಶ್ರಮಿಸುತ್ತಿರುವುದರಿಂದಾಗಿ ಹಲವಾರು ಜನ ರೋಗಿಗಳ ಜೀವವನ್ನು ರಕ್ಷಿಸಿದ ಕೀರ್ತಿ ಎಲ್ಲ ಸಿಬ್ಬಂದಿಗಳಿಗೆ ಸಲ್ಲುತ್ತದೆ ಎಂದರು.
ಆಸ್ಪತ್ರೆಯ ನಿರ್ದೇಶಕಿ ಡಾ. ಸೈದಾ ಸುಬಿಯಾ ತನ್ವೀರ, ಡಾ. ರಾಜೀವ ಕೊಣಿನ, ಡಾ.ಅಹ್ಮದ ಫರಾಜ್ ಪಟೇಲ್, ಡಾ.ಅನ್ನು ಚವ್ಹಾಣ, ಡಾ.ಅಯೇಶಾ ಖಾನಂ, ವೈದ್ಯಕೀಯ ಸಿಬ್ಬಂದಿಗಳಾದ ಫಯಾತ್ ಅಹ್ಮದ, ಸನಾ, ಫರಹೀನ್, ಸಾದಿಯಾ, ಮೊಹ್ಮದಿ, ಅಕ್ಸಾ, ಅರ್ಫಾ, ಶೋಹೇಬ, ಸವಿತಾ, ಹೀನಾ, ದಿನೇಶ, ಸಾಗರ ಮತ್ತು ಸೈಫನ ಪಟೇಲ ಸೇರಿದಂತೆ ಸಿಬ್ಬಂದಿ ಬಳಗ ಭಾಗವಹಿಸಿದ್ದರು.



























